ಗುವಾಹಟಿ: ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ಹಲವಾರು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪೂರ್ಣಗೊಳಿಸಿದೆ. ಇದಕ್ಕೆ ಉತ್ತಮ ಉದಾಹರಣೆ ಅಸ್ಸಾಂನ ಲುಂಡಿಂಗ್-ಸಿಲ್ಚಾರ್ ರೈಲ್ವೇ ಟ್ರ್ಯಾಕ್ನ್ನು ಅಗಲೀಕರಣಗೊಳಿಸಿದ್ದು.
ಈ ಯೋಜನೆಗೆ 1996ರಲ್ಲಿ ನಿರ್ಧಾರಕೈಗೊಳ್ಳಲಾಗಿತ್ತು. ಆದರೆ ಸ್ಥಳೀಯ ಭಯೋತ್ಪಾದನೆಯ ಸಮಸ್ಯೆಯಿಂದಾಗಿ ಕಾರ್ಯ ನೆನೆಗುದಿಗೆ ಬಿದ್ದಿತ್ತು. ಆದರೀಗ ಎರಡು ವರ್ಷದಲ್ಲಿ ಅದರ ಕಾರ್ಯ ಪೂರ್ಣಗೊಂಡಿದೆ. ಇದರ ಶ್ರೇಯಸ್ಸು ಮೋದಿ ಸರ್ಕಾರಕ್ಕೆ ಸಲ್ಲುತ್ತದೆ.
ನಾರ್ಥ್ ಈಸ್ಟ್ ಫ್ರಾಂಟಿಯರ್ ರೈಲ್ವೇಯ 215 ಕಿ.ಮೀ ಉದ್ದದ ಲುಂಡಿಂಗ್-ಸಿಲ್ಚಾರ್ ಸೆಕ್ಷನ್ನನ್ನು ಇದೀಗ ಬ್ರಾಡ್ ಗೇಜ್ ಆಗಿ ಪರಿವರ್ತಿಸಲಾಗಿದೆ. ಇದು ಅತ್ಯಂತ ಹಳೆಯ ರೈಲ್ವೇ ಟ್ರ್ಯಾಕ್ ಆಗಿದ್ದು ನಾರ್ಥ್ ಕಚರ್ ಹಿಲ್ಸ್ನ್ನು ಹಾದು ಹೋಗುವುದರಿಂದ ಅಸ್ಸಾಂನ ರಮಣೀಯ ನೋಟ ಇಲ್ಲಿ ಕಾಣಸಿಗುತ್ತದೆ.
ಇದನ್ನು ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿತ್ತು, 1996ರಲ್ಲಿ ಅಗಲೀಕರಣಗೊಳಿಸಿ ಅಭಿವೃದ್ಧಿ ಮಾಡುವ ಯೋಜನೆ ರೂಪಿಸಲಾಗಿತ್ತು. ಆದರೆ ಭಯೋತ್ಪಾದಕರ ಕಾಟದಿಂದ ಕಾರ್ಯ ನೆನೆಗುದಿಗೆ ಬಿದ್ದಿತ್ತು. ರಾಜ್ಯಸಭೆಗೆ ಅಸ್ಸಾಂನಿಂದ ಆಯ್ಕೆಯಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಇದರ ಅನುದಾನವನ್ನು ಹೆಚ್ಚು ಮಾಡಿದ್ದರಾದರೂ ರೈಲ್ವೇ ಕಾರ್ಯವನ್ನು ಆರಂಭಿಸಿರಲಿಲ್ಲ.
ಇದೀಗ ಈಶಾನ್ಯ ಭಾಗದ ರೈಲ್ವೇ ಸಂಪರ್ಕವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿರುವ ಮೋದಿ ಸರ್ಕಾರ ಈ ರೈಲ್ವೇ ಟ್ರ್ಯಾಕ್ನ್ನು ಅಭಿವೃದ್ಧಿಗೊಳಿಸಿ ಜನರ ಪ್ರಶಂಸೆಗೆ ಪಾತ್ರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.