ಮುಂಬಯಿ: ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹದುಲ್ ಮುಸ್ಲಿಮೀನ್ ಪಕ್ಷದ ನಾಯಕರಾದ ಅಸ್ಸಾವುದ್ದೀನ್ ಮತ್ತು ಅಕ್ಬರುದ್ದೀನ್ ಓವೈಸಿ ರಾಕ್ಷಸರು ಎಂದು ಶಿವಸೇನೆ ಕಿಡಿಕಾರಿದೆ.
ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಬರೆದಿರುವ ಅದು ‘ಈ ಇಬ್ಬರು ರಾಕ್ಷಸರು ದೇಶಕ್ಕೆ ದೊಡ್ಡ ಕಂಟಕ, ಇವರು ರಾಕ್ಷಸರಿದ್ದಂತೆ’ ಎಂದು ಹೇಳಿದೆ.
ಇವರಿಬ್ಬರು ಪಾಕಿಸ್ಥಾನದ ಪರವಾಗಿದ್ದು, ಅವರಿಗೂ ನಮ್ಮ ದೇಶಕ್ಕೂ ಸಂಬಂಧವೇ ಇಲ್ಲ, ಅವರು ಪಾಕಿಸ್ಥಾನದ ಧ್ವಜವನ್ನು ಔರಂಗಬಾದ್ ಮತ್ತು ನವಿ ಮುಂಬಯಿಯಲ್ಲಿ ಹಾರಿಸಲು ಬಯಸುತ್ತಿದ್ದಾರೆ ಎಂದು ಆರೋಪಿಸಿದೆ.
ಔರಂಗಬಾದ್ ನಗರಕ್ಕೆ ಸಂಬಾಜಿ ನಗರ ಎಂಬ ಹೆಸರಿಡಬೇಕು ಎಂದು ಅದು ಆಗ್ರಹಿಸಿರುವ ಅದು, ಕಾರ್ಪೊರೇಶನ್ ಚುನಾವಣೆಯಲ್ಲಿ ಕೋಮುವಾದ ಬಿತ್ತಲು ಓವೈಸಿಗಳು ಪ್ರಯತ್ನಿಸುತ್ತಿದ್ದಾರೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.