ಮುಂಬಯಿ: ಎಐಬಿ ಕಾಮಿಡಿಯನ್ ತನ್ಮಯ್ ಭಟ್ ಸಚಿನ್ ತೆಂಡೂಲ್ಕರ್ ಮತ್ತು ಲತಾ ಮಂಗೇಶ್ಕರ್ ವಿಷಯದಲ್ಲಿ ಕಾಮಿಡಿ ಮಾಡಲು ಹೋಗಿ ಅದರ ಬದಲು ಅವಮಾನ ಮಾಡಿದಂತಾಗಿದ್ದು, ಇದೀಗ ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಎಐಬಿಯಲ್ಲಿ ಇವರು ’ಸಚಿನ್ ವರ್ಸಸ್ ಲತಾ ಸಿವಿಲ್ ವಾರ್’ ಎಂಬ ಕ್ಯಾಪ್ಷನ್ ನೀಡಿ ಬಿಡುಗಡೆ ಮಾಡಿದ ವೀಡಿಯೋ ಇದೀಗ ಜನಾಕ್ರೋಶಕ್ಕೆ ಕಾರಣವಾಗಿದೆ. ಟ್ವಿಟರ್ನಲ್ಲಿ ತನ್ಮಯ್ ವಿರುದ್ಧ ಟೀಕೆಗಳ ಸುರಿಮಳೆಯಾಗುತ್ತಿದೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆಯಂತು ಇವರಿಗೆ ಬೆದರಿಕೆ ಹಾಕಿದ್ದು, ಮಾತ್ರವಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದೆ. ಮುಂಬಯಿ ಪೊಲೀಸ್ ಆಯುಕ್ತರು ಈ ಪ್ರಕರಣದ ತನಿಖೆ ಮಾಡುತ್ತಿದ್ದಾರೆ.
ಈ ವೀಡಿಯೋದಲ್ಲಿ ತನ್ಮಯ್ ಲೆಜೆಂಡ್ ಗಳಾದ ಸಚಿನ್ ತೆಂಡೂಲ್ಕರ್ ಮತ್ತು ಲತಾ ಮಂಗೇಶ್ಕರ್ಗೆ ಅವರಿಗೆ ಅವಮಾನ ಮಾಡಿದ್ದಾರೆ ಎನ್ನಲಾಗಿದೆ.
ಇಷ್ಟಕ್ಕೆ ನಿಲ್ಲದ ತನ್ಮಯ್ ಅವಾಂತರ, ’ಅಡ್ವಾಣಿ ಕೆ ಬುಡಾಪೆ’ ಎಂದು ಟ್ವಿಟ್ ಮಾಡಿ, ಬಳಿಕ ಡಿಲೀಟ್ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.