ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಂದಿನ ಜೂನ್ ತಿಂಗಳಿನಲ್ಲಿ 22 ಉಪಗ್ರಹಗಳನ್ನು ಉಡಾವಣೆಗೊಳಿಸಲಿದೆ ಎಂದು ಹೇಳಿದೆ.
3 ತಂತ್ರಜ್ಞಾನಗಳನ್ನು ಬಳಸಿ ಮರುಬಳಕೆ ಸ್ಪೇಸ್ ಶಟಲ್ನ ಯಶಸ್ವೀ ಉಡಾವಣೆ ಬಳಿಕ 22 ಉಪಗ್ರಹಗಳನ್ನು ಒಂದೇ ಬಾರಿಗೆ ಉಡಾವಣೆಗೊಳಿಸಲು ಇಸ್ರೋ ಚಿಂತನೆ ನಡೆಸಿದೆ. ಇದರ ಜೊತೆಗೆ ಕಾರ್ಟೋಗ್ರಾಫಿಕ್ ಸರಣಿ ಉಪಗ್ರಹವನ್ನೂ ಉಡಾವಣೆಗೊಳಿಸಲಾಗುವುದು. ಎಂದು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದ್ದಾರೆ.
ಭಾರತದ ಮೂರು ಉಪಗ್ರಹ ಹಾಗೂ ಅಮೇರಿಕ, ಕೆನಡಾ, ಇಂಡೋನೇಷ್ಯಾ, ಜರ್ಮನಿಯ 19 ವಾಣಿಜ್ಯ ಉಪಗ್ರಹಗಳನ್ನು ಪಿಎಸ್ಎಲ್ವಿ ಸಿ34 ಬಳಸಿ ಜೂನ್ ತಿಂಗಳ ಅಂತ್ಯದಲ್ಲಿ ಉಡಾವಣೆಗೊಳಿಸಲಾಗುವುದು ಎಂದು ಕಿರಣ್ ಕುಮಾರ ಹೇಳಿದ್ದಾರೆ.
ಬಾಹ್ಯಾಕಾಶ ಸಂಸ್ಥೆ 2008ರಲ್ಲಿ ಒಂದೇ ಬಾರಿಗೆ 10 ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.