ನವದೆಹಲಿ: ಹೈಸ್ಪೀಡ್ ಸ್ಪ್ಯಾನಿಶ್ ಟಲ್ಗೋ ರೈಲಿನ ಪರೀಕ್ಷಾರ್ಥ ಓಡಾಟ ಸೋಮವಾರದಿಂದ ಆರಂಭಗೊಂಡಿದೆ. ಇದು ಗಂಟೆಗೆ 110-115 ಕಿ.ಮೀ ವೇಗದಲ್ಲಿ ಓಡಾಟ ನಡೆಸುತ್ತಿದ್ದು, ಭಾನುವಾರ ಉತ್ತರಪ್ರದೇಶದ ಬರೇಲಿ-ಮೊರಾದಬಾದ್ ನಡುವೆ ಪರೀಕ್ಷಾರ್ಥ ಓಡಾಟ ನಡೆಸಿದೆ.
ಲೈಟರ್ ಮತ್ತು ಫಾಸ್ಟರ್ ಟ್ರೈನ್ ಇದಾಗಿದ್ದು, 9 ಕೋಚ್ಗಳನ್ನು ಒಳಗೊಂಡಿದೆ. 4,500ಎಚ್ಪಿ ಡಿಸೇಲೆ ಎಂಜಿನ್ ಇದಕ್ಕೆ ಬೇಕಾಗುತ್ತದೆ. ಪರೀಕ್ಷಾರ್ಥ ಪ್ರಯೋಗದ ವೇಳೆ 70 ನಿಮಿಷಗಳಲ್ಲಿ 90 ಕಿ.ಮೀ ದೂರ ಕ್ರಮಿಸಿದೆ.
ಬರೇಲಿಯಿಂದ ಬೆಳಿಗ್ಗೆ 9.05 ಗಂಟೆಗೆ ಹೊರಟ ರೈಲು ಮೋರಾದಾಬಾದ್ನ್ನು 10.15ಕ್ಕೆ ತಲುಪಿದೆ. ಇದು ಗಂಟೆಗೆ 100ರಿಂದ 115 ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಎರಡು ಎಕ್ಸಿಕ್ಯೂಟಿವ್ ಕ್ಲಾಸ್ ಕೋಚ್ಗಳು, 4 ಚೇರ್ ಕಾರ್, 1 ಕ್ಯಾಫೆಟಿರಿಯಾ, ಒಂದು ಪವರ್ ಕಾರ್, ಸಿಬ್ಬಂದಿ ಮತ್ತು ಉಪಕರಣಗಳ ಕೋಚ್ಗಳನ್ನು ಹೊಂದಿದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಮಾರ್ಗದಲ್ಲಿ ಜೂನ್ 12ರವರೆಗೆ ಪರೀಕ್ಷಾರ್ಥವಾಗಿ ಈ ರೈಲು ಓಡಾಡಲಿದೆ. ಬಳಿಕ ಮಥುರ ಮತ್ತು ಪಲ್ವಾಲ್ನ ರಾಜಧಾನಿ ರೂಟ್ನಲ್ಲಿ 40 ದಿನಗಳ ಕಾಲ ಓಡಾಡಲಿದೆ. ಪರೀಕ್ಷಾರ್ಥ ಪ್ರಯೋಗದ ಬಳಿಕ ಟೈಮಿಂಗ್ ಟ್ರಯಲ್ ನಡೆಯಲಿದೆ.
ಟಾಲ್ಗೋ ಲೈಟರ್ ರೈಲುಗಳು ಶೇ. 30 ರಷ್ಟು ಕಡಿಮೆ ಇಂಧನವನ್ನು ವ್ಯಯ ಮಾಡುತ್ತವೆ.
ಸ್ಪೇನ್ನ ಹೈ-ಸ್ಪೀಡ್ ಮತ್ತು ಸೆಮಿ ಹೈ-ಸ್ಪೀಡ್ ರೈಲು ನಿರ್ಮಾಣ ಕಂಪೆನಿ ಟ್ಯಾಲ್ಗೊ ತನ್ನದೇ ವೆಚ್ಚದಲ್ಲಿ ಪ್ರಯೋಗ ನಡೆಸಲು ರೈಲು ಬೋಗಿಗಳನ್ನು ಒದಗಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.