ನವದೆಹಲಿ: ಭಾರತೀಯ ವಾಯುಸೇನೆಯ ಬಳಕೆಗೆ ಐದನೇ ಪೀಳಿಗೆಯ ಯುದ್ಧ ವಿಮಾನಗಳ ಜಂಟಿ ಅಭಿವೃದ್ಧಿಗೆ ಭಾರತ ಹಾಗೂ ರಷ್ಯಾ ಶೀಘ್ರದಲ್ಲೇ ಒಪ್ಪೊಂದಕ್ಕೆ ಸಹಿ ಹಾಕಲಿವೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಭಾರತೀಯ ವಾಯು ಸೇನೆಯು ಈಗಿರುವ ಯುದ್ಧ ವಿಮಾನಗಳಲ್ಲಿ ೩೦ಕ್ಕೂ ಅಧಿಕ ಬದಲಾವಣೆಗಳೊಂದಿಗೆ 5G ಹೊಸ ಮಾದರಿಯ ಯುದ್ಧ ವಿಮಾನಗಳನ್ನು ಹೊಂದಲು ಬಯಸಿದ್ದು, ರಷ್ಯಾ ಜೊತೆ ಮಾತುಕತೆ ಜಾರಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಮಾನಗಳನ್ನು ಭಾರತದ ಹಿಂದೂಸ್ಥಾನ ಏರೋನಾಟಿಕ್ಸ್ ಲಿಮಿಟೆಡ್ ಹಾಗೂ ರಷ್ಯಾದ ಯುನೈಟೆಡ್ ಏರ್ಕ್ರಾಫ್ಟ್ ಕಾರ್ಪೋರೇಶನ್ ಜಂಟಿಯಾಗಿ ನಿರ್ಮಿಸಲಿವೆ. ಎಂಐಜಿ 29s ಹಾಗೂ ಎಂಐಜಿ 27s ಬದಲಾಗಿ 2 ಸೀಟುಗಳ 200 ಮತ್ತು 1 ಸೀಟು ಹೊಂದಿರುವ 50 ವಿಮಾನಗಳನ್ನು ನಿರ್ಮಿಸಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.