ಚೆನ್ನೈ : ತಿಂಗಳ ಪ್ರತಿ 9ನೇ ತಾರೀಕಿನಂದು ಗರ್ಭಿಣಿಯರಿಗೆ ಉಚಿತ ಚಿಕಿತ್ಸೆಯನ್ನು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಖಾಸಗೀ ಆಸ್ಪತ್ರೆಗಳಿಗೆ ಮನವಿ ಮಾಡಿದ್ದರು. ಅದರ ಮರುದಿನವೇ ಅಪೊಲೋ ಆಸ್ಪತ್ರೆ ಮೋದಿಯವರ ಮನವಿಗೆ ಸ್ಪಂದಿಸಿದೆ.
ಆಪೋಲೋ ಆಸ್ಪತ್ರೆ ತನ್ನ 64 ಆಸ್ಪತ್ರೆಗಳಲ್ಲಿ ಪ್ರತಿ ತಿಂಗಳ 9ನೇ ತಾರೀಕಿನಂದು ೯೦೦೦ ವೈದ್ಯರಿಂದ ಗರ್ಭಿಣಿಯರಿಗೆ ಚಿಕಿತ್ಸೆ ನೀಡಲು ಮುಂದಾಗಿದೆ ಎಂದು ಅಪೊಲೋ ಗ್ರೂಪ್ನ ಅಧ್ಯಕ್ಷ ಡಾ. ಪ್ರತಾಪ್ ರೆಡ್ಡಿ ಹೇಳಿದ್ದು ಈಗಾಗಲೇ ಪ್ರಧಾನಿ ಮೋದಿಯವರು ಅರೋಗ್ಯ ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನ ವಹಿಸುತ್ತಿದ್ದು, ಗರ್ಭಿಣಿಯರಿಗೆ ಮಾತ್ರವಲ್ಲದೇ ಮಕ್ಕಳ ತಜ್ಞರು ಸೇರಿ ಎಲ್ಲಾ ವಿಧದ ಆರೋಗ್ಯ ತಪಾಸಣೆಯನ್ನು ಸೇರಿಸಿದರೆ ಉತ್ತಮ ಎಂದು ಅವರು ಹೇಳಿದ್ದಾರೆ.
ಅಲ್ಲದೇ ಈ ಮೂಲಕ ದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ಕಾಣಲಿದ್ದು ಈ ಕೆಲಸದಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಡಬ್ಯು.ಎಚ್.ಓ ಪ್ರಕಾರ ಭಾರತದಲ್ಲಿ 16000 ಜನರಿಗೆ ಓರ್ವ ವೈದ್ಯ ಚಿಕಿತ್ಸೆ ನೀಡುತ್ತಿದ್ದು, ಇದರ ಸಂಖ್ಯೆ 1000 ಜನರಿಗೆ ಓರ್ವ ವೈದ್ಯ ಚಿಕಿತ್ಸೆ ನೀಡುವ ಅವಶ್ಯಕತೆಯಿದೆ ಎಂದು ಡಬ್ಯು.ಎಚ್.ಓ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.