ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸ್ಟಾರ್ಟ್ ಅಪ್ ಇಂಡಿಯಾ ಜೊತೆ ಕೈಜೋಡಿಸುವ ಮೂಲಕ ಭಾರತದ ಆರ್ಥಿಕ ತಂತ್ರಜ್ಞಾನ ಮತ್ತು ಗೇಮಿಂಗ್ ಉದ್ಯಮದ ಸ್ಟಾರ್ಟ್ಅಪ್ಗಳನ್ನು ತಮ್ಮ ದೇಶದಲ್ಲೂ ವಿಸ್ತರಿಸಿ ಮಾರ್ಗದರ್ಶನ ನೀಡುವಂತೆ ಬೆಹ್ರೇನ್ ಬಯಸಿದೆ.
ಆರ್ಥಿಕ ಸೇವೆ ತಂತ್ರಜ್ಞಾನ ಪ್ರಮುಖವಾಗಿದ್ದು, ಅದರಲ್ಲೂ ಷೆರಿಯಾ ಕಾಂಪ್ಲಿಯಂಟ್ ಫಿನ್ಟೆಕ್ ವಿಶೇಷವಾಗಿದೆ. ವೀಡಿಯೋ ಗೇಮಿಂಗ್ ಮತ್ತು ಗೇಮಿಂಗ್ ಆಪ್ಗಳು ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ಪ್ರದೇಶದಲ್ಲಿ ವಿಶೇಷವಾಗಿ ಸೌದಿ ಅರೇಬಿಯಾದಲ್ಲಿ ಜನಪ್ರಿಯವಾಗಿದೆ. ಬೆಹ್ರೇನ್ನ ಸಹಾಯದಿಂದ ಗೇಮಿಂಗ್ ಕಂಪೆನಿಗಳು ಆಟಗಳನ್ನು ಅರೇಬಿಕ್ ಸ್ವರೂಪಕ್ಕೆ ಬದಲಿಸಬಹುದು ಎಂದು ಬೆಹ್ರೇನ್ ಆರ್ಥಿಕ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸೈಮನ್ ಗಾಲ್ಪಿನ್ ಹೇಳಿದ್ದಾರೆ.
ಸ್ಥಳೀಯರು, ಹೂಡಿಕೆದಾರರು, ಉದ್ಯಮಿಗಳು ಸಕ್ರಿಯವಾಗಿ ಭಾರತದ ಸ್ಟಾರ್ಟ್ಅಪ್ಗಳಲ್ಲಿ ಹೂಡಿಕೆ ಮಾಡುವ ಮೂಲಕ ಅಲ್ಲಿ ಮಾರುಕಟ್ಟೆ ಆರಂಭಿಸಬಹುದು. ಸ್ಟಾರ್ಟ್ಅಪ್ ಇಂಡಿಯಾ ಜೊತೆ ಗಲ್ಫ್ ಸಹಕಾರ ಮಂಡಳಿಯನ್ನು ಒಗ್ಗೂಡಿಸುವುದರೊಂದಿಗೆ ಭಾರತಕ್ಕೆ ಸಹಕಾರ ನೀಡಲಿದ್ದೇವೆ ಎಂದು ಗಾಲ್ಪಿನ್ ಹೇಳಿದ್ದಾರೆ.
ಭಾರತದ ರಿಯಲ್ ಎಸ್ಟೇಟ್ಗಳಲ್ಲಿ ಕೇವಲ ಹೂಡಿಕೆ ಮಾಡುವುದು ಮಾತ್ರವಲ್ಲ, ಅನುಭವಿ ಉದ್ಯಮಿಗಳು, ಏಂಜೆಲ್ ಹೂಡಿಕೆದಾರರಿಂದ ಅನುಭವ ಪಡೆದು ಭಾರತ ಮತ್ತು ಬೆಹ್ರೇನ್ನಲ್ಲಿ ಸಕ್ರಿಯವಾಗಿ ಹೂಡಿಕೆ ಮಾಡುವಂತೆ ಬೆಹ್ರೇನ್ ಬಯಸಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.