ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ಇ) 10ನೇ ತರಗತಿ ಬೋರ್ಡ್ ಪರೀಕ್ಷೆಗಳ ಫಲಿತಾಂಶ ಶನಿವಾರ ಪ್ರಕಟಗೊಂಡಿದೆ.
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು http://cbseresults.nic.in/ ವೆಬ್ಸೈಟ್ನಲ್ಲಿ ತಮ್ಮ ರೋಲ್ ನಂಬರ್ (ಕ್ರಮ ಸಂಖ್ಯೆ) ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಲಾಗ್-ಇನ್ ಆಗಿ ಫಲಿತಾಂಶ ವೀಕ್ಷಿಸಬಹುದು. ವಿದ್ಯಾರ್ಥಿಗಳು ಬೋರ್ಡ್ನ ’ಸಿಬಿಎಸ್ಇ- ಕ್ಲಾಸ್ 10 ಎಕ್ಸಾಮಿನೇಶನ್’ ಲಿಂಕ್ನಲ್ಲಿ ಖಾಸಗಿ ಅಭ್ಯರ್ಥಿ ಅಥವಾ ಮುಕ್ತ ಅಭ್ಯರ್ಥಿ (Private or Open Candidate) ಎಂದು ಆಯ್ಕೆ ಮಾಡಬೇಕು.
ಈ ವರ್ಷ 15,309 ಶಲೆಗಳಿಂದ ಸುಮಾರು 8,92,685 ವಿದ್ಯಾರ್ಥಿಗಳು ಹಾಗೂ 6,06,437 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 14,99,122 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಈ ಬಾರಿ ಶೇ.96.21 ಫಲಿತಾಂಶ ಬಂದಿದ್ದು ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ.96.36 ವಿದ್ಯಾರ್ಥಿನಿಯರು ಹಾಗೂ ಶೇ.96.11 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಶೇ.97.32 ಫಲಿತಾಂಶ ಬಂದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.