ಲಂಡನ್ : ದ್ವಿತೀಯ ವಿಶ್ವಯುದ್ಧದ ಸಂದರ್ಭ ನಾಪತ್ತೆಯಾಗಿದ್ದ ಜಲಾಂತರ್ಗಾಮಿ 73 ವರ್ಷಗಳ ಬಳಿಕ ಪತ್ತೆಯಾಗಿದ್ದು , ಇದರಲ್ಲಿ 71 ಜನರ ಶವಗಳು ದೊರೆತಿದೆ.
73 ವರ್ಷಗಳ ಹಿಂದೆ ದ್ವಿತೀಯ ವಿಶ್ವಯುದ್ಧದ ಸಂದರ್ಭ ಲಂಡನ್ ಇಟೆಲಿಯ ಯದ್ಧನೌಕೆಗಳನ್ನು ಹೊಡೆದುರುಳಿಸಲು ಈ ಜಲಾಂತರ್ಗಾಮಿಯನ್ನು 1942 ರಲ್ಲಿ ಡಿ. 28 ರಂದು ಮಾಲ್ಟದಿಂದ ಕಳಿಸಿದ್ದು, ಡಿ. 31 ರ ವರೆಗೆ ನೌಕೆಗೆ ಸಂದೇಶ ಕಳುಹಿಸಲಾಗುತ್ತಿದ್ದು, ಅದರ ನಂತರ ಯಾವುದೇ ಸಂದೇಶ ಈ ಜಲಾಂತರ್ಗಾಮಿಯಿಂದ ದೊರೆತಿಲ್ಲ.
ತದ ನಂತರ ಇದು ಶತ್ರುಪಡೆಗಳು ಸಮುದ್ರದಲ್ಲಿ ಹುದುಗಿಸಿಟ್ಟಿದ್ದ ನೆಲ ಬಾಂಬ್ಗೆ ತುತ್ತಾಗಿ ನಾಶಗೊಂಡಿದೆ ಎಂದು ಭಾವಿಸಲಾಗಿತ್ತು. ಆದರೆ ಇತ್ತೀಚಿಗೆ ಸಮುದ್ರದ 100 ಮೀಟರ್ ಆಳದಲ್ಲಿ ಶೋಧನೆ ನಡೆಸುವಾಗ ಇದು ಪತ್ತೆಯಾಗಿದ್ದು, 1290 ಟನ್ ಭಾರವಿದೆ. ಅಲ್ಲದೇ ನೌಕೆಗೆ ಅಲ್ಪಪ್ರಮಾಣದಲ್ಲಿ ಹಾನಿಯಾಗಿದ್ದು, ಹಿಂದಿನಂತೆ ಯಥಾಸ್ಥಿತಿಯಲ್ಲಿದೆ. ಇದರಲ್ಲಿರುವ 71 ಮಂದಿ ಆಮ್ಲಜನಕ ಕೊರತೆಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.