ವಾಷಿಂಗ್ಟನ್: ಭಾರತದ ನ್ಯೂಕ್ಲಿಯರ್ ಸಪ್ಲೈಯರ್ಸ್ ಗ್ರೂಪ್ (ಎನ್ಎಸ್ಜಿ) ಸದಸ್ಯತ್ಯಕ್ಕೆ ಪಾಕಿಸ್ಥಾನ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಅಮೇರಿಕ ಅಸಮಾಧಾನಗೊಂಡಿದೆ.
ಭಾರತದ ಎನ್ಎಸ್ಜಿ ಸದಸ್ಯತ್ಯ ಪರಮಾಣು ಶಸ್ತ್ರಾಸ್ತ್ರಗಳ ಪೈಪೋಟಿಗಾಗಿ ಅಲ್ಲ. ಇದು ಪರಮಾಣು ಶಕ್ತಿಯ ನಾಗರಿಕ ಬಳಕೆಗಾಗಿ ಆಗಿದೆ ಎಂದು ಅಮೇರಿಕ ಹೇಳಿದೆ.
ಅಮೇರಿಕ ಅಧ್ಯಕ್ಷ ಬರಾಕ್ ಒಬಾಮಾ 2015ರಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಆಡಳಿತದ ಎಲ್ಲಾ ಅಗತ್ಯ ಆವಶ್ಯಕತೆಗಳನ್ನು ಹೊಂದಿದೆ ಎಂದು ದೃಢಪಡಿಸಿದ್ದು, ಅದು ಎನ್ಎಸ್ಜಿ ಸದಸ್ಯತ್ವ ಪಡೆಯಲು ಸಿದ್ಧವಾಗಿದೆ ಎಂದು ಹೇಳಿದ್ದರು. ಆದರೆ ಭಾರತದ ಪರ ಇತರ ಸದಸ್ಯ ರಾಷ್ಟ್ರಗಳು ಒಮ್ಮತದಿಂದ ಎಷ್ಟು ಮತ ನೀಡುತ್ತವೆ ಎಂದು ಕಾದು ನೋಡಬೇಕಿದೆ ಎಂದು ಅಮೇರಿಕದ ಸ್ಟೇಟ್ ಡಿಪಾರ್ಟ್ಮೆಂಟ್ನ ಸಹಾಯಕ ವಕ್ತಾರ ಮಾರ್ಕ್ ಟೋನರ್ ಹೇಳಿದ್ದಾರೆ.
ಪಾಕಿಸ್ಥಾನ ಸಾರ್ವಜನಿಕವಾಗಿ ತಮ್ಮ ಆಸಕ್ತಿಯನ್ನು ತೋರಿದೆ. ಯಾವುದೇ ರಾಷ್ಟ್ರವು ಎನ್ಎಸ್ಜಿ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಬಹುದು. ಅದರ ಸದಸ್ಯತ್ವದ ಕುರಿತು ಒಮ್ಮತದ ನಿಧಾರ ಕೈಗೊಳ್ಳಲಾಗುವುದು ಎಂದು ಟೋನರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.