ನವದೆಹಲಿ; ಪಠ್ಯಪುಸ್ತಕ, ಶಬ್ದ ಕೋಶ, ಶಬ್ದಸಂಗ್ರಹ, ವಿಶ್ವಕೋಶ, ಭಾಷಾ ಕಲಿಕಾ ಸಾಧನ ಹೀಗೆ ಎಲ್ಲದರಿಂದಲೂ ಜ್ಞಾನವನ್ನು ಒಂದೇ ವೇದಿಕೆಯಿಂದ ಸಂಪಾದಿಸುವ ಸಲುವಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಬಹುಭಾಷಾ ಆನ್ಲೈನ್ ಡಿಕ್ಷನರಿ ‘ಭಾರತ್ವಾಣಿ’ಯನ್ನು ಆರಂಭಿಸಿದೆ.
www.bharatavani.in ಎಂಬ ಬಹುಭಾಷಾ ನಾಲ್ಡೆಜ್ ಪೋರ್ಟಲ್ನ್ನು ಸಚಿವೆ ಸ್ಮೃತಿ ಇರಾನಿ ಬಿಡುಗಡೆ ಮಾಡಿದ್ದಾರೆ, 22 ಭಾಷೆಗಳಲ್ಲಿ ಇದು ಇದ್ದು, ಮುಂಬರುವ ದಿನಗಳಲ್ಲಿ 100 ಭಾಷೆಗಳಲ್ಲಿ ಇದು ಲಭ್ಯವಾಗಲಿದೆ.
ಈ ವೆಬ್ ಪೋರ್ಟಲ್ನಲ್ಲಿ ಸದ್ಯ 130 ಡಿಕ್ಷನರಿಗಳು, ಶಬ್ದಸಂಗ್ರಹ, ಪರಿಭಾಷೆಗಳು ಲಭ್ಯವಾಗಿವೆ. ಈ ಡಿಕ್ಷನರಿಗಳು ಟೆಕ್ಸ್ಟ್ ಮತ್ತು ಪಿಡಿಎಫ್ ಫಾರ್ಮೆಟ್ನಲ್ಲಿವೆ. ಭಾರತ್ವಾಣಿಯ ಹೋಂಪೇಜ್ ಹಿಂದಿಯಲ್ಲಿದ್ದು, ಇಂಟರ್ಫೇಸ್ ಇಂಗ್ಲೀಷ್ನಲ್ಲಿದೆ. ಇತರ ಭಾಷೆಗಳಿಗೆ ಪ್ರತ್ಯೇಕ ಸಬ್ ಡೊಮೈನ್ಗಳು ಲಭ್ಯವಿದೆ. ಅಂದರೆ ಕನ್ನಡ ಭಾಷೆಯೂ kannada.bharatavani.in.ನಲ್ಲಿ ಲಭ್ಯವಾಗುತ್ತದೆ.
ಪ್ರಿಂಟ್ ಮತ್ತು ಇತರ ಫಾರ್ಮೆಟ್ಗಳಲ್ಲಿ ಲಭ್ಯವಿರುವ ಕಂಟೆಂಟ್ಗಳನ್ನು ಡಿಜಿಟೈಸ್ ಮಾಡಿ ಪೋರ್ಟಲ್ಗೆ ಸರ್ಚೇಬಲ್ ಟೆಕ್ಸ್ಟ್ ಮಾದರಿಯಲ್ಲಿ ಹಾಕಲಾಗುತ್ತದೆ.
ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ, ಕಾಲೇಜುಗಳ, ಲೈಬ್ರರಿ, ಯೂನಿವರ್ಸಿಟಿಗಳ ಎಲ್ಲಾ ಭಾಷೆಯಲ್ಲಿರುವ ನಾಲ್ಡೆಜ್ ಕಂಟೆಂಟ್ನ್ನು ಒಂದೇ ಭಾಷೆಯಲ್ಲಿ ಸಿಗುವಂತೆ ಮಾಡಲು ಈ ಪೋರ್ಟಲ್ ಸಹಕಾರಿಯಾಗಿದೆ.
ಮಾನವ ಸಂಪನ್ಮೂಲ ಸಚಿವಾಲಯ ಭಾರತ್ವಾಣಿ ಎಂಬ ಬಹುಭಾಷ ಆ್ಯಪ್ನ್ನೂ ಬಿಡುಗಡೆ ಮಾಡಿದ್ದು, ಇದರಿಂದ ಒಂದು ಭಾಷೆಯ ಕಂಟೆಂಟ್ನ್ನು ಇನ್ನೊಂದು ಭಾಷೆಯ ಮೂಲಕ ಸರ್ಚ್ ಮಾಡಬಹುದಾಗಿದೆ. ಅಲ್ಲದೇ ಬೇರೆ ಭಾಷೆಯ ಅರ್ಥವನ್ನೂ ಪಡೆದುಕೊಳ್ಳಬಹುದಾಗಿದೆ. ಸದ್ಯ ಇದು 35 ಭಾಷೆಗಳಲ್ಲಿ ಲಭ್ಯವಿದೆ.
ನ್ಯಾಷನಲ್ ಅಡ್ವೈಸರ್ ಕಮಿಟಿ ಭಾರತ್ವಾಣಿಯನ್ನು ನಡೆಸುತ್ತದೆ, ಇದಕ್ಕೆ ತಾಂತ್ರಿಕ ಸಹಾಯವನ್ನು ಟೆಕ್ನಾಲಜಿ ಅಡ್ವೈಸರಿ ಕಮಿಟಿ ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.