ಮುಂಬಯಿ; ಕೊನೆಗೂ ಪ್ರಕೃತಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ಜುಲೈ 1 ರಿಂದ ಅದು ತನ್ನ ರಾಜ್ಯದಲ್ಲಿ ಸುಮಾರು 2 ಕೋಟಿ ಗಿಡಗಳನ್ನು ನೆಡುವ ಅಭಿಯಾನಕ್ಕೆ ಚಾಲನೆ ನೀಡಲಿದೆ.
ಮಹಾರಾಷ್ಟ್ರದಲ್ಲಿ ಕೇವಲ ಶೇ.20 ರಷ್ಟು ಮಾತ್ರ ಅರಣ್ಯವಿದೆ. ಇದು ಪ್ರಕೃತಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ ಗಿಡಗಳನ್ನು ನೆಡಲು ಮುಂದಾಗಿದ್ದೇವೆ ಎಂದು ಅಲ್ಲಿನ ಅರಣ್ಯ ಮತ್ತು ಪರಿಸರ ಸಚಿವ ಸುಧೀರ್ ಮುಂಗತಿವಾರ್ ತಿಳಿಸಿದ್ದಾರೆ.
ಗಿಡಗಳನ್ನು ನೆಡುವ ಮೂಲಕ ಭವಿಷ್ಯದ ಸ್ಥಿತಿಯನ್ನು ಸುಧಾರಿಸುವ ಯೋಜನೆ ಮಹಾರಾಷ್ಟ್ರ ಸರ್ಕಾರದ್ದು, ಜುಲೈ 1 ರಿಂದ ರಾಜ್ಯಾದ್ಯಂತ 2 ಕೋಟಿ ಗಿಡಗಳನ್ನು ವಿವಿಧ ಇಲಾಖೆ, ಜಿಲ್ಲಾಡಳಿತಗಳ ನೆರವಿನಿಂದ ನೆಡುವ ಗುರಿಯನ್ನು ಅಲ್ಲಿನ ಸರ್ಕಾರ ಹೊಂದಿದೆ.
ಗಿಡಗಳ ಬದುಕುವ ಪ್ರಮಾಣ ಶೇ.75 ರಷ್ಟು ಮಾತ್ರ ಇದೆ, ಆದರೆ ನಾವು ಆಧುನಿಕ ತಂತ್ರಜ್ಞಾನ ಬಳಸಿ ಅದರ ಬದುಕುವ ಪ್ರಮಾಣ ಶೇ.85 ಕ್ಕೆ ಏರಿಕೆಯಾಗುವಂತೆ ಪ್ರಯತ್ನಪಡಲಿದ್ದೇವೆ. ಮುಂದಿನ 5 ವರ್ಷದಲ್ಲಿ ಅತೀ ಹೆಚ್ಚು ಅರಣ್ಯ ಹೊಂದಿರುವ ರಾಜ್ಯವಾಗಿ ನಾವು ಹೊರಹೊಮ್ಮುವ ಭರವಸೆ ಇದೆ ಎಂದು ಎಂದು ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.