ಲಂಡನ್: ಸಂದೇಶಗಳನ್ನು ತತ್ಕ್ಷಣವಾಗಿ ಕಳುಹಿಸಲು ಬಳಸಲಾಗುವ ವಾಟ್ಸ್ಆ್ಯಪ್ ಪ್ರಪಂಚದಲ್ಲೇ ಅತಿ ಹೆಚ್ಚು ಬಳಸಲಾಗುವ ಜನಪ್ರಿಯ ಆ್ಯಪ್ ಎಂದು ಪ್ರಖ್ಯಾತಿ ಪಡೆದಿದೆ. ಜಗತ್ತಿನಾದ್ಯಂತ 109 (ಶೇ.55.6) ರಾಷ್ಟ್ರಗಳಲ್ಲಿ ವಾಟ್ಸ್ಆ್ಯಪ್ ಅಪ್ಲಿಕೇಶನ್ ಬಳಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಭಾರತ, ಬ್ರೆಜಿಲ್, ಮೆಕ್ಸಿಕೋ, ಓಷೇನಿಯ, ದಕ್ಷಿಣ ಅಮೇರಿಕಾ, ಯೂರೋಪ್, ಏಷ್ಯಾದ ರಾಷ್ಟ್ರಗಳಲ್ಲಿ ವಾಟ್ಸ್ಆ್ಯಪ್ ಬಳಸಲಾಗುತ್ತಿದ್ದು, ಒಟ್ಟು 1 ಬಿಲಿಯನ್ ಬಳಕೆದಾರರನ್ನು ಹೊಂದಿದೆ. ಭಾರತದಲ್ಲೇ ಸುಮಾರು 70 ಮಿಲಿಯನ್ ಬಳಕೆದಾರರು ವಾಟ್ಸ್ಆ್ಯಪ್ ಬಳಸುತ್ತಿದ್ದಾರೆ.
ಬ್ರಿಟನ್ ಮೂಲದ ಸಿಮಿಲರ್ವೆಬ್ ಮಾಹಿತಿ ತಂತ್ರಜ್ಞಾನ ಕಂಪೆನಿ ನಡೆಸಿದ ಸಮೀಕ್ಷೆ ಪ್ರಕಾರ ವಿಶ್ವದ 187 ರಾಷ್ಟ್ರಗಳ ಪೈಕಿ 109 ರಾಷ್ಟ್ರಗಳು ವಾಟ್ಸ್ಆ್ಯಪ್ ಬಳಸುತ್ತಿವೆ. ಫೇಸ್ಬುಕ್ ಮೆಸೇಜ್ ಆ್ಯಪ್ ಆಗಿರುವ ಮೆಸೆಂಜರ್ನ್ನು 49 ರಾಷ್ಟ್ರಗಳಲ್ಲಿ ಬಳಸಲಾಗುತ್ತಿದ್ದು, ಎರಡನೇ ಸ್ಥಾನದಲ್ಲಿದೆ.
ಈ ಎರಡು ಆ್ಯಪ್ಗಳಲ್ಲದೇ ಏಕಮಾತ್ರ ಆ್ಯಪ್ ಆಗಿರುವ ’ವೈಬರ್’ನ್ನು 10 ರಾಷ್ಟ್ರಗಳು ಬಳಸುತ್ತಿವೆ. ಇನ್ನೂ ಹಲವು ಆ್ಯಪ್ಗಾದ ಲೈನ್, ವೀಚ್ಯಾಟ್, ಟೆಲಿಗ್ರಾಂ ಆ್ಯಪ್ಗಳು ಚೀನಾ, ಇರಾನ್, ಜಪಾನ್ಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.