ಹೈದರಾಬಾದ್: ತೆಲಂಗಾಣ ಸರ್ಕಾರ ಆಗಸ್ಟ್ 2014 ರಲ್ಲಿ ಕೈಗೊಂಡ ಪ್ರಮುಖ ಕೌಟುಂಬಿಕ ಸಮೀಕ್ಷೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ಗೆ ಸೇರಿಕೊಂಡಿದೆ.
ನಾಲ್ಕು ಲಕ್ಷ ಸರ್ಕಾರಿ ನಾಕರರು ಒಂದೇ ದಿನದಲ್ಲಿ ಬೆಳಗ್ಗೆ 7 ಗಂಟೆಯಿಂದ ರಾತ್ರಿ 8 ಗಂಟೆ ಒಳಗೆ 1.09 ಕುಟುಂಬಗಳ ಸಮೀಕ್ಷೆ ನಡೆಸಿದೆ ಎಂದು ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ.
ತೆಲಂಗಾಣ ರಾಜ್ಯಾದ್ಯಂತ ಕುಟುಂಬಗಳ ಮಾಹಿತಿ, ಕುಟುಂಬ ಸದಸ್ಯರ ಶೈಕ್ಷಣಿಕ ಮಾಹಿತಿ, ಪೋಸ್ಟ್ ಆಫೀಸ್ ಕಚೇರಿಯಲ್ಲಿ ಅವರ ಉಳಿತಾಯ, ಬ್ಯಾಂಕ್ ಖಾತೆಯ ವಿವರಗಳು, ಮೊಬೈಲ್ ಫೋನ್ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಅನಿಲ ಸಂಪರ್ಕ ವಿವರಗಳನ್ನು ಪಡೆದು ನಮೂದಿಸಲಾಗಿದೆ.
ಸರ್ಕಾರದ ಕಲ್ಯಾಣ ಯೋಜನೆಗಳ ನಿಜವಾದ ಫಲಾನುಭವಿಗಳನ್ನು ಗುರುತಿಸಲು ಈ ಸಮೀಕ್ಷೆ ನಡೆಸಿ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.