ನವದೆಹಲಿ: ಮಾರ್ಚ್ 2017 ರೊಳಗೆ ದೇಶದ ಎಲ್ಲಾ ನಾಗರಿಕರಿಗೂ ವಿಶೇಷ ಗುರುತಿನ ಸಂಖ್ಯೆ ನೀಡಬೇಕು ಎನ್ನುವ ಗುರಿ ಹೊಂದಿರುವ ನರೇಂದ್ರ ಮೋದಿ ಸರ್ಕಾರ, ಶೀಘ್ರದಲ್ಲೇ ನವಜಾತ ಶಿಶುಗಳಿಗೂ ಆಧಾರ್ ಕಾರ್ಡ್ ವಿತರಣೆ ಮಾಡಲಿದೆ.
ಆಸ್ಪತ್ರೆಯಲ್ಲಿ ಮಗು ಜನನವಾದ ಕೂಡಲೇ ಅದರ ಫೋಟೋವನ್ನು ತೆಗೆದು, ಪೋಷಕರ ವಿವರಗಳನ್ನು ದಾಖಲಿಸಿ ಆಧಾರ್ ನಂಬರ್ ನೀಡುವ ಯೋಜನೆ ಆರಂಭವಾಗಲಿದೆ ಎಂದು ಯುಐಡಿಎಐ ಪ್ರಧಾನ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.
ಯುಐಡಿಎಐಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ನಿರ್ದೇಶನದಂತೆ ಈ ಯೋಜನೆ ಆರಂಭವಾಗಲಿದೆ. ಈಗಾಗಲೇ 100 ಕೋಟಿ ಜನರಿಗೆ ಆಧಾರ್ ಸಂಖ್ಯೆ ಸಿಕ್ಕಿದ್ದು, ಉಳಿದ 28 ಕೋಟಿ ಜನರನ್ನು ಆದಷ್ಟು ಬೇಗ ಎನ್ರೋಲ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ, ಮುಂದಿನ ಮಾರ್ಚ್ ಒಳಗೆ ಎಲ್ಲರಿಗೂ ಆಧಾರ್ ಸಂಖ್ಯೆ ಕೊಡುವ ಗುರಿ ಹೊಂದಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.