ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಪಾಕಿಸ್ಥಾನ ಪಾಲಿಸಿಯ ಬಗ್ಗೆ ಅವರ ವಿರೋಧಿಗಳು ಸಾಕಷ್ಟು ಬಾರಿ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದಕ್ಕೆಲ್ಲಾ ಮೌನವಾಗಿ ಕಾರ್ಯದ ಮೂಲಕವೇ ಮೋದಿ ಉತ್ತರ ನೀಡಿದ್ದಾರೆ.
ಇದೀಗ ಮೋದಿಯವರ ಪಾಕಿಸ್ಥಾನ ಪಾಲಿಸಿಯ ಬಗ್ಗೆ ನಡೆಸಲಾದ ಸಮೀಕ್ಷೆಯೊಂದು ಈ ಬಗ್ಗೆ ಜನರ ಅನಿಸಿಕೆ ಹೇಗಿದೆ ಎಂಬುದರ ವಿವರವನ್ನು ಪಡೆದುಕೊಂಡಿದೆ.
ಸಮೀಕ್ಷೆಯ ಪ್ರಕಾರ ಶೇ.79 ರಷ್ಟು ಮಂದಿ ಮೋದಿ ಪಾಕಿಸ್ಥಾನ ಪಾಲಿಸಿ ಅತ್ಯಂತ ಧೈರ್ಯಶಾಲಿ ಹಾಗೂ ವಾಸ್ತವದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶೇ.79 ರಲ್ಲಿ ಶೇ. 39 ರಷ್ಟು ಮಂದಿ ಪಾಕಿಸ್ಥಾನ ಪಾಲಿಸಿ ಧೈರ್ಯಯುತವಾಗಿದೆ ಎಂದು ಅಭಿಪ್ರಾಯಿಸಿದರೆ, ಶೇ.40 ರಷ್ಟು ಮಂದಿ ವಾಸ್ತವದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉಳಿದ ಶೇ .21ರಷ್ಟು ಮಂದಿ ಮೋದಿ ಪಾಲಿಸಿ ಸಿದ್ಧಾಂತಗಳಿಂದ ಗೊಂದಲಮಯವಾಗಿದೆ ಎಂದಿದ್ದಾರೆ.
ದೆಹಲಿ, ಕೋಲ್ಕತ್ತಾ, ಮುಂಬಯಿ, ಚೆನ್ನೈ, ಬೆಂಗಳೂರು, ಹೈದರಾಬಾದ್, ಪುಣೆ, ಅಹ್ಮದಾಬಾದ್ ನಗರಗಳಲ್ಲಿ ಐಪಿಎಸ್ಓಎಸ್ ಈ ಸಮೀಕ್ಷೆಯನ್ನು ನಡೆಸಿದ್ದು, 1348 ಮಂದಿ ಇದರಲ್ಲಿ ಭಾಗವಹಿಸಿದ್ದಾರೆ. ಇವರ ವಯಸ್ಸು 18 ರಿಂದ 45 ವರ್ಷ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.