ನವದೆಹಲಿ: ಗಿನ್ನಸ್ ದಾಖಲೆ ಮಾಡಲು ಇಲ್ಲೊಬ್ಬ ಅಸಾಮಿ ತನ್ನ ಹಲ್ಲುಗಳನ್ನೇ ಕಿತ್ತು ಹಾಕಿದ್ದಾನೆ, ಮಾತ್ರವಲ್ಲ ಮೈಮೇಲೆ 366 ಬಾವುಟಗಳ ಟ್ಯಾಟೋಗಳನ್ನು ಹಾಕಿಸಿಕೊಂಡಿದ್ದಾನೆ. ಈತನ ದೇಹದಲ್ಲಿ ಒಟ್ಟು 500 ಟ್ಯಾಟೋಗಳಿವೆ.
ಈ ಗಿನ್ನಿಸ್ ದಾಖಲೆಯ ಹುಚ್ಚು ಹಿಡಿಸಿಕೊಂಡಾತನ ಹೆಸರು ಹರ್ ಪ್ರಕಾಶ್ ರಿಷಿ. ಇದುವರೆಗೆ ತಾನು 20 ದಾಖಲೆಗಳನ್ನು ಮಾಡಿದ್ದೇನೆ ಎನ್ನುವ ಈತ ತನ್ನನ್ನು ತಾನು ಗಿನ್ನಿಸ್ ರಿಷಿ ಎಂದೇ ಬಣ್ಣಿಸುತ್ತಾನೆ.
ತನ್ನ ಬಾಯಿಯಲ್ಲಿ 500 ಸ್ಟ್ರಾಗಳು ಮತ್ತು 50 ಉರಿಯುವ ಕ್ಯಾಂಡಲ್ಗಳನ್ನು ಇಡಲು ಜಾಗವಿರಲಿ ಎಂಬ ಕಾರಣಕ್ಕೆ ಈತ ಹಲ್ಲುಗಳನ್ನು ಕಿತ್ತು ಹಾಕಿದ್ದಾನೆ.
1942 ರಲ್ಲಿ ದೆಹಲಿಯ ಸಿನಿಮಾ ಹಾಲೊಂದರಲ್ಲಿ ಜನಿಸಿದ ಈತ, 1990ರಲ್ಲಿ ತನ್ನ ಇಬ್ಬರು ಗೆಳೆಯರೊಂದಿಗೆ 1001 ಗಂಟೆಗಳ ಕಾಲ ಸತತ ಬೈಕ್ ಓಡಿಸಿ ಮೊದಲ ಗಿನ್ನಿಸ್ ದಾಖಲೆ ಮಾಡಿದ್ದ. ಈ ಯಶಸ್ಸು ಆತನನ್ನು ಇನ್ನಷ್ಟು ಬುದ್ಧಿಗೇಡಿ ದಾಖಲೆಗಳನ್ನು ಮಾಡಲು ಪ್ರೇರೇಪಣೆ ನೀಡಿತು.
ನವದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಫಿಝಾ ಡೆಲಿವರಿ, 4 ನಿಮಿಷದಲ್ಲಿ ಟೋಮ್ಯಾಟೋ ಕೆಚ್ಅಪ್ ಕುಡಿಯೋದು, ದೇಹದ ಮೇಲೆ ಟ್ಯಾಟೋ ಹಾಕಿಸುವುದು, ಬಾಯಿಯಲ್ಲಿ ಸ್ಟ್ರಾ, ಕ್ಯಾಂಡಲ್ ತುರುಕುವುದು ಇತ್ಯಾದಿ ವಿಚಿತ್ರ ಕಾರ್ಯಗಳ ಮೂಲಕ ಈತ ದಾಖಲೆಯನ್ನು ಮಾಡಿದ್ದಾನೆ.
ಮೋದಿಯ ಟ್ಯಾಟೋದಿಂದ ಹಿಡಿದು ಬರಾಕ್ ಒಬಾಮ, ಕ್ವೀನ್ ಎಲಿಜಬೆತ್ ಟ್ಯಾಟೋಗಳೋ ಈತನ ದೇಹದಲ್ಲಿದೆ. ಮಹಾತ್ಮಾ ಗಾಂಧಿ ಟ್ಯಾಟೋ ಕೂಡ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.