ನವದೆಹಲಿ: ಉತ್ತರಪ್ರದೇಶದ ಚುನಾವಣೆಯಲ್ಲಿ ಬಿಜೆಪಿಯ ಸಿಎಂ ಅಭ್ಯರ್ಥಿಯಾಗುವ ಬಗ್ಗೆ ಕೇಳಿ ಬಂದಿರುವ ಗಾಳಿ ಸುದ್ದಿಗಳನ್ನು ಅಲ್ಲಗೆಳೆದಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಅಮೇಥಿಯ ಜನರಿಗೆ ಅಭಿವೃದ್ಧಿಯ ಬಗ್ಗೆ ನೀಡಿರುವ ಭರವಸೆಯನ್ನು ಈಡೇರಿಸುವುದಕ್ಕಾಗಿ ಅಲ್ಲಿಗೆ ನಿರಂತರವಾಗಿ ಭೇಟಿ ಕೊಡುತ್ತಿದ್ದೇನೆ ಎಂದಿದ್ದಾರೆ.
ತಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ನ ಮೊದಲ ಕುಟುಂಬ ಮೂಲಭೂತ ಸೌಕರ್ಯವನ್ನು ಒದಗಿಸಲು ವಿಫಲವಾಗಿದೆ, ಗಾಂಧಿಗಳು ತಮ್ಮ ಕಾರ್ಯಕರ್ತರಿಂದ ಕೇವಲ ಗುಲಾಮಗಿರಿಯನ್ನು ಬಯಸುತ್ತಿದ್ದಾರೆ. ಪಶ್ಚಿಮಬಂಗಾಳದಲ್ಲಿ ಕಾಂಗ್ರೆಸ್ ಶಾಸಕರು ಸ್ಟ್ಯಾಂಪ್ ಪೇಪರ್ಗೆ ಸಹಿ ಹಾಕಿರುವುದೇ ಇದಕ್ಕೆ ಸಾಕ್ಷಿ ಎಂದಿದ್ದಾರೆ.
ಕಾಂಗ್ರೆಸ್ನಂತೆ ಬಿಜೆಪಿ ಸ್ಟ್ಯಾಂಪ್ ಪೇಪರ್ ಮೇಲೆ ಸಹಿ ಮಾಡಿಸಿಕೊಳ್ಳುವ ಪಕ್ಷವಲ್ಲ ಎಂದಿದ್ದಾರೆ.
ಹಿಂದೆ ಮಗುವಿನ ರೀತಿಯಲ್ಲಿ ನರೇಂದ್ರ ಮೋದಿ ವಿರುದ್ಧ ಟೀಕೆ ಮಾಡಿದ್ದೆ, ಆದರೆ ಅವರೊಂದಿಗೆ ಮಾತನಾಡಿದ ಬಳಿಕ ಎಲ್ಲಾ ಗೊಂದಲ ಬಗೆಹರಿದಿದೆ. ನಾನು ಮಾಡಿದ ಟೀಕೆಗಳಿಗೆ ಅವರು ಕ್ಷಮಾಪಣೆಯನ್ನೂ ಕೇಳಿಲ್ಲ.
ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ ಕೂಡಲೇ ನಾನು ಕೇಸರಿ ಭೂತವಾಗುವುದಿಲ್ಲ. ಸಂಸತ್ತಿನಲ್ಲಿ ರೋಹಿತ್ ವೆಮುಲಾ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ರಾಹುಲ್ ಗಾಂಧಿ ನಗುತ್ತಿರುವುದನ್ನು ನಾನು ನೋಡಿದ್ದೇನೆ ಎಂದಿದ್ದಾರೆ.
ಬಿಜೆಪಿ ಪಕ್ಷ ನಿರ್ಧರಿಸಿದರೆ ಮಾತ್ರ ಅಮೇಥಿಯಲ್ಲಿ ಚುನಾವಣೆಗೆ ಮತ್ತೆ ಸ್ಪರ್ಧಿಸುತ್ತೇನೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.