ನವದೆಹಲಿ: ಅಮೇರಿಕದಲ್ಲಿ ನಡೆದ ಇಂಟೆಲ್ ಅಂತಾರಾಷ್ಟ್ರೀಯ ವಿಜ್ಞಾನ ಮತ್ತು ಇಂಜಿನಿಯರಿಂಗ್ ಮೇಳ (ಐಎಸ್ಇಎಫ್)ದಲ್ಲಿ 6 ಮಂದಿ ಭಾರತೀಯ ವಿದ್ಯಾರ್ಥಿಗಳು ಪ್ರತಿಷ್ಠಿತ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.
16 ವಿದ್ಯಾರ್ಥಿಗಳನ್ನೊಳಗೊಂಡ ಭಾರತೀಯ ತಂಡ 9,500 ಡಾಲರ್ನೊಂದಿಗೆ ಮೂರು ಪ್ರತಿಷ್ಠಿತ ಪ್ರಶಸ್ತಿಗಳು ಹಾಗೂ ಜೈವಿಕ ತಂತ್ರಜ್ಞಾನ, ಔಷಧ, ಜೀವವೈದ್ಯಕೀಯ ಇಂಜಿನಿಯರಿಂಗ್ ಮತ್ತು ಗಣಿತ ವಿಭಾಗದಲ್ಲಿ 3 ವಿಶೇಷ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ದೆಹಲಿಯ ಮಾಡರ್ನ್ ಸ್ಕೂಲ್ನ ವಿದ್ಯಾರ್ಥಿ ಶ್ರೇಯಸ್ ಕಪೂರ್ ’ಗೂಗಲ್ ಥಿಂಕಿಂಗ್ ಬಿಗ್ ಅವಾರ್ಡ್’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮೊಬೈಲ್ ಫೋನ್ ಆಧಾರಿತ ದೃಷ್ಟಿಮಾಪನ ಹೃಬ್ರಿಡ್ ಚಿತ್ರಗಳ ಮೇಲೆ ನಡೆಸಿದ ಕಾರ್ಯಕ್ಕೆ ಶ್ರೇಯಸ್ 1000 ಯುಎಸ್ ಡಾಲರ್ ಬಹುಮಾನ ಪಡೆದುಕೊಂಡಿದ್ದು, ಈ ಪ್ರಯೋಗದಿಂದಾಗಿ ಆತ ನಾಸಾ ಮತ್ತು ಜೀವ ವೈದ್ಯಕೀಯ ಇಂಜಿನಿಯರಿಂಗ್ ಅವಾರ್ಡ್ 3ನೇ ಸ್ಥಾನ ಗಳಿಸಿದ್ದಾನೆ.
ನಾಗ್ಪುರದ ಸೆಂಟರ್ ಪಾಯಿಂಟ್ ಸ್ಕೂಲ್ನ ಸುಹಾನಿ ಸಚಿನ್ ಹಾಗೂ ದಿವ್ಯಾ ಕ್ರಾಂತಿ ಸಸ್ಯ ವಿಜ್ಞಾನದಲ್ಲಿ ಹತ್ತಿಗಳಲ್ಲಿ ಜೈವಿಕ ಕ್ರಿಮಿಗಳ ನಿಯಂತ್ರಣಕ್ಕೆ ಎಂಡೋಫೈಟ್ಸ್ ಬಳಕೆಯ ನವೀನ ತಂತ್ರ ಅಭಿವೃದ್ಧಿಗೆ ತೃತೀಯ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ದೆಹಲಿಯ ಮಹಾರಾಜಾ ಅಗರ್ಸೈನ್ ಪಬ್ಲಿಕ್ ಶಾಲೆಯ ವಾಸುದೇವ ಮಲ್ಯನ್ ಪರಿವರ್ತನ ವೈದ್ಯಕೀಯ ವಿಜ್ಞಾನದಲ್ಲಿ ’ನೋವೆಲ್ ಪೇಪರ್ ಸಂವೇದಕ ಮಲ್ಟಿಪಲ್ ಸ್ಕ್ಲೆರೋಸಿಸ್ನ ಒಂದು ಪರೀಕ್ಷೆಗಾಗಿ 4ನೇ ಸ್ಥಾನ ಪಡೆದುಕೊಂಡಿದ್ದಾನೆ.
ವಿಶ್ವದಾದ್ಯಂತ ವಿದ್ಯಾರ್ಥಿಗಳು ಮೇ ೨೪ರಂದು ಅರಿಝಾನ್ನಲ್ಲಿ ನಡೆದ ಇಂಟೆಲ್ ಫೇರ್ 2016ನಲ್ಲಿ ಭಾಗವಹಿಸಿದ್ದರು. 9ರಿಂದ 12ನೇ ತರಗತಿಯ ಈ ವಿದ್ಯಾರ್ಥಿಗಳು ಸ್ಥಳೀಯ, ಪ್ರಾದೇಶಿಕ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಇಂಟೆಲ್ ಐಎಸ್ಇಫ್ 2016ರಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದರು.
ವಿಶ್ವದ 77 ರಾಷ್ಟ್ರಗಳ 419 ಸಂಯೋಜಿತ ಮೇಳಗಳ 1,700 ವಿದ್ಯಾಥಿಗಳು ಈ ಮೇಳದಲ್ಲಿ ಪಾಲ್ಗೊಂಡಿದ್ದು, ಭಾರತದ 16 ವಿದ್ಯಾರ್ಥಿಗಳು ವಿಜ್ಞಾನ ಸಂಶೋಧನೆ ಮತ್ತು ಆವಿಷ್ಕಾರ ಯೋಜನೆ 2016ರ ಫೈನಲ್ ಪ್ರವೇಶಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.