ನವದೆಹಲಿ: ಕೇಂದ್ರ ಸಂಪುಟವು 6 ಹೊಸ ಐಐಟಿ ಇನ್ಸ್ಟಿಟ್ಯೂಟ್ಗಳನ್ನು ಸ್ಥಾಪಿಸಲು ಸಮ್ಮತಿಸಿದೆ.
ಈ ಐಐಟಿ ಕೇಂದ್ರಗಳು ಆಂಧ್ರ ಪ್ರದೇಶದ ತಿರುಪತಿ, ಕೇರಳದ ಪಾಲಕ್ಕಾಡ್, ಕರ್ನಾಟಕದ ಧಾರವಾಡ, ಛತ್ತೀಸ್ಗಢದ ಭಿಲಾಯಿ, ಗೋವಾ ಹಾಗೂ ಜಮ್ಮುಗಳಲ್ಲಿ ಸ್ಥಾಪನೆಯಾಗಲಿದೆ. ಧನ್ಬಾದ್ನ ಇಂಡಿಯನ್ ಸ್ಕೂಲ್ ಆಫ್ ಮೈನ್ಸ್ (ಐಎಸ್ಎಂ)ನ್ನು ಐಐಟಿ ದರ್ಜೆಗೆ ಪರಿವರ್ತಿಸಲಾಗುವುದು ಎಂದು ಕೇಂದ್ರ ಹೇಳಿದೆ.
ಕೇಂದ್ರ ಸಂಪುಟ ಇನ್ಸ್ಟಿಟ್ಯೂಟ್ಸ್ ಆಫ್ ಟೆಕ್ನಾಲಜಿ ಕಾಯ್ದೆ 1961 ತಿದ್ದುಪಡಿಯೊಂದಿಗೆ ಹೊಸ 6 ಐಐಟಿಗಳನ್ನು ಸೇರಿಸಲು ಪೂರ್ವಾನ್ವಯ ಅನುಮೋದನೆ ನೀಡಿದೆ ಎಂದು ಅಧಿಕೃತವಾಗಿ ಹೇಳಿದೆ. ಧನ್ಬಾದ್ನ ಐಎಸ್ಎಂ ಕೂಡ ಇನ್ಸ್ಟಿಟ್ಯೂಟ್ಸ್ ಆಫ್ ಟೆಕ್ನಾಲಜಿ ಕಾಯ್ದೆ 1961 ಪರಿಧಿಯಲ್ಲಿ ಬರಲಿದೆ ಎಂದು ಅದು ಹೇಳಿದೆ.
ಆಂಧ್ರಪ್ರದೇಶದಲ್ಲಿ ಎನ್ಐಟಿ ಸ್ಥಾಪಿಸಲು ಅನುಮೋದನೆ ನೀಡಲಾಗಿದ್ದು, ಇದು ಸದ್ಯ ಆಂಧ್ರ ಪ್ರದೇಶ ಸೊಸೈಟೀಸ್ ಕಾಯ್ದೆ 2001ರ ಅಡಿಯಲ್ಲಿ ಸೊಸೈಟಿ ಎಂದು ದಾಖಲಾಗಿದೆ. ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ವಿಜ್ಞಾನ, ಶಿಕ್ಷಣ ಮತ್ತು ಸಂಶೋಧನೆ (ಎನ್ಐಟಿ-ಎಸ್ಇಆರ್) ತಿದ್ದುಪಡಿ ಬಿಲ್ 2016 ಕ್ಕೂ ರಚನೆಗೆ ಅನುಮೋದನೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.