ನವದೆಹಲಿ: ಆರ್ಬಿಐ ಗವರ್ನರ್ ರಘರಾಮ್ ರಾಜನ್ ಅವರನ್ನು ಎರಡನೇ ಅವಧಿಗೂ ಆಯ್ಕೆ ಮಾಡಬೇಕು ಎಂದು ಕೋರಿ ಆನ್ಲೈನ್ ಪಿಟಿಷನ್ ಆರಂಭವಾಗಿದೆ. ಅವರ ಪರವಾಗಿ ಆನ್ಲೈನ್ ಜಾಹೀರಾತುಗಳೂ ಹರಿದಾಡುತ್ತಿವೆ.
ಈ ಪಿಟಿಷನ್ 50 ಸಾವಿರ ಗಡಿ ತಲುಪಲು ಇನ್ನು ಕೇವಲ 6 ಸಾವಿರ ಸಹಿಗಳಷ್ಟೇ ಬಾಕಿ ಇವೆ.
ಆರ್ಬಿಐನ ಗವರ್ನರ್ ಆಗಿ ರಾಜನ್ ಅವರನ್ನು ಎರಡನೇ ಬಾರಿಗೆ ಆಯ್ಕೆ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಪಿಟಿಷನ್ ಮೂಲಕ ಮನವಿ ಮಾಡಿಕೊಳ್ಳಲಾಗುತ್ತಿದೆ.
ಚೇಂಜ್.ಆರ್ಗ್ನಲ್ಲಿ ಪಿಟಿಷನ್ ಈಗಾಗಲೇ 43,930 ಮಂದಿ ಸಹಿ ಹಾಕಿದ್ದಾರೆ. ಕೇವಲ ನಾಲ್ಕು ದಿನಗಳ ಹಿಂದೆ ಇದರ ಸಂಖ್ಯೆ 2,500 ಇತ್ತು.
ರಾಜನ್ ಅವರು ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ. ಭಾರತದ ಆರ್ಥಿಕತೆಯನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂದು ಪಿಟಿಷನ್ ಅಭಿಯಾನ ಆರಂಭಿಸಿರುವ ರಾಜೇಶ್ ಪಲರಿಯಾ ಹೇಳಿದ್ದಾರೆ.
ಇತ್ತೀಚಿಗಷ್ಟೇ ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ರಾಜನ್ ಅವರನ್ನು ವಜಾ ಮಾಡುವಂತೆ ಆಗ್ರಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.