ಮುಂಬಯಿ: ಜನರ ನೆರವಿಗೆ ತಕ್ಷಣ ಧಾವಿಸುವ ರೈಲ್ವೇ ಸಚಿವ ಸುರೇಶ್ ಪ್ರಭು ಮತ್ತೊಂದು ಮಹತ್ಕಾರ ಮಾಡಿ ಜನರ ಶ್ಲಾಘನೆಗೆ ಗುರಿಯಾಗಿದ್ದಾರೆ.
ಮನೆ ಬಿಟ್ಟು ಪರಾರಿಯಾಗಿದ್ದ ಇಬ್ಬರು ಬಾಲಕಿಯರ ಬಗ್ಗೆ ಟ್ವಿಟರ್ನಲ್ಲಿ ಅರಿತುಕೊಂಡ ಪ್ರಭು ತಕ್ಷಣ ಕಾರ್ಯಪ್ರವೃತ್ತರಾಗಿ ರೈಲಿನಲ್ಲಿದ್ದ ಬಾಲಕಿಯರನ್ನು ಅವರ ಕುಟುಂಬ ಸದಸ್ಯರೊಂದಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಬಿಎಸ್ಸಿ 12ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಹಿನ್ನಲೆಯಲ್ಲಿ 18 ವರ್ಷದ ಹೆಣ್ಣು ಮಕ್ಕಳಿಬ್ಬರು ತಮ್ಮ ನಿವಾಸ 14 ನಾರ್ತ್ ಪರಗಣದಿಂದ ಓಡಿ ಹೋಗಿದ್ದರು. ಮನೆಯವರು ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು. ಅವರ ಫೋನ್ ಟ್ರೇಸ್ ಮಾಡಿದಾಗ ಬಾಲಕಿಯರು ಮುಂಬಯಿ ರೈಲಿನಲ್ಲಿರುವುದು ಪತ್ತೆಯಾಗಿದೆ.
ಈ ವೇಳೆ ಒಂದು ಬಾಲಕಿಯ ತಂದೆ ಸಚಿವ ಪ್ರಭುಗೆ ಸಹಾಯಕ್ಕಾಗಿ ಟ್ವಿಟ್ ಮಾಡಿದ್ದಾರೆ. ತಕ್ಷಣವೇ ರೈಲ್ವೇ ಸಚಿವರು ತಮ್ಮ ರೈಲ್ವೇ ಇಲಾಖೆಯನ್ನು ಅಲರ್ಟ್ ಮಾಡಿಸಿದ್ದಾರೆ. ಗೀತಾಜಂಲಿ ಎಕ್ಸ್ಪ್ರೆಸ್ನಲ್ಲಿ ನಾಸಿಕ್ನಲ್ಲಿ ಬಾಲಕಿಯರು ಇರುವುದು ಪತ್ತೆಯಾದ ಬಳಿಕ ಅಧಿಕಾರಿಗಳು ಅವರನ್ನು ಕೆಳಗಿಳಿಸಿ ಪೋಷಕರಿಗೆ ಒಪ್ಪಿಸಿದ್ದಾರೆ.
ಒಟ್ಟಿನಲ್ಲಿ ರೈಲ್ವೇ ಸಚಿವರ ಕಾರ್ಯವೈಖರಿಯಿಂದ ಬಾಲಕಿಯರ ರಕ್ಷಣೆಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.