ನವದೆಹಲಿ: ಮುಂದಿನ ವರ್ಷದೊಳಗೆ ಭಾರತ ದೇಶೀ ನಿರ್ಮಿತ ನೂತನ ’ಸೂಪರ್ ಕಂಪ್ಯೂಟರ್’ನ್ನು ಹೊಂದಲಿದೆ.
ಭಾರತವನ್ನು ತಂತ್ರಜ್ಞಾನ ಸುಧಾರಿತ ರಾಷ್ಟಗಳ ಪೈಕಿಗೆ ಸೇರ್ಪಡೆಗೊಳಿಸಲು ಸರ್ಕಾರ ಹಮ್ಮಿಕೊಂಡಿರುವ 4,500ಕೋಟಿ ರೂಪಾಯಿ ಕಾರ್ಯಕ್ರಮದ ಭಾಗವಾಗಿ ಸೂಪರ್ ಕಂಪ್ಯೂಟರ್ನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ದೇಶದ ಮೊದಲ ಸೂಪರ್ ಕಂಪ್ಯೂಟರ್ ’ಪರಮ್’ನ್ನು ನಿರ್ಮಿಸಿದ ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ ಈ ಸೂಪರ್ ಕಂಪ್ಯೂಟರ್ ನಿರ್ಮಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.
ಕಳೆದ ಮಾರ್ಚ್ನಲ್ಲಿ ಸರ್ಕಾರ ನ್ಯಾಷನಲ್ ಸೂಪರ್ಕಂಪ್ಯೂಟಿಂಗ್ ಮಿಶನ್ಗೆ ಅನುಮೋದನೆ ನೀಡಿತ್ತು, ಇದರ ಅನ್ವಯ ಮುಂದಿನ 7 ವರ್ಷದಲ್ಲಿ 80 ಸೂಪರ್ಕಂಪ್ಯೂಟರ್ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಇದರಲ್ಲಿ ಕೆಲವನ್ನು ಆಮದು ಮಾಡಿಕೊಳ್ಳಲಾಗುತ್ತದೆ, ಉಳಿದವನ್ನು ದೇಶೀಯವಾಗಿ ನಿರ್ಮಿಸಲಾಗುತ್ತದೆ. ಆಗಸ್ಟ್ 2017ರ ಹೊತ್ತಿಗೆ ಒಂದು ಸೂಪರ್ ಕಂಪ್ಯೂಟರ್ ನಿರ್ಮಾಣವಾಗಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಅಶುತೋಷ್ ಶರ್ಮಾ ತಿಳಿಸಿದ್ದಾರೆ.
’ಹೀಟ್ನ್ನು ಕಂಟ್ರೋಲ್ ಮಾಡುವ ಕಾರ್ಯದ ಮೇಲೆ ಕಾರ್ಯ ಮಾಡುತ್ತಿದ್ದೇವೆ, ಈ ಸೂಪರ್ಕಂಪ್ಯೂಟರನ್ನು ರನ್ ಮಾಡಲು 1 ಸಾವಿರ ಕೋಟಿ ವ್ಯಯವಾಗಲಿದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.