ಗ್ಯಾಂಗ್ಟಾಕ್: ಪರಿಸರ ಸ್ನೇಹಿ ಹಾಗೂ ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಗಾಗಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಿನರಲ್ ವಾಟರ್ (ಖನಿಜಯುಕ್ತ ನೀರು) ಬಾಟಲ್ಗಳು ಹಾಗೂ ಫೋಮ್ ಆಹಾರ ಕಂಟೇನರ್ಗಳ ಬಳಕೆಯನ್ನು ಸಿಕ್ಕಿಂ ಸರ್ಕಾರ ನಿಷೇಧಿಸಿದೆ.
ಸರ್ಕಾರಿ ಕಾರ್ಯಕ್ರಮಗಳು, ಸಭೆಗಳಲ್ಲಿ ನೀರಿನ ಬಾಟಲ್ಗಳ ಅತಿರೇಕದ ಬಳಕೆಯಿಂದಾಗಿ ಕಸದ ರಾಶಿ ನಿರ್ಮಾಣಗೊಂಡು ಅದರ ತ್ಯಾಜ್ಯ ಡಂಪಿಂಗ್ಗೆ ಸಮಸ್ಯೆಯಾಗುತ್ತಿದೆ ಎಂದು ಸಿಕ್ಕಿಂ ಸರ್ಕಾರ ಹೇಳಿದ್ದು, ಗೃಹ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ಗಳ ರೂಪದಲ್ಲಿ ಹೆಚ್ಚುತ್ತಿರುವ ಘನ ತ್ಯಾಜ್ಯದ ಪ್ರಮಾಣವನ್ನು ಕಡಿಮೆಯಾಗಿಸಲು ಸರ್ಕಾರಿ, ಸಭೆಗಳು, ಕಾರ್ಯಕ್ರಮಗಳಲ್ಲಿ ಬಾಟಲ್ ನೀರಿನ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಅಲೋಕ್ ಶ್ರಿವಾಸ್ತವ ಹೇಳಿದ್ದಾರೆ.
ಈ ಬಾಟಲ್ಗಳ ಪರ್ಯಾಯವಾಗಿ ಮರುಬಳಕೆ ನೀರಿನ ಬಾಟಲ್ಗಳು, ಮರುಬಳಕೆ ನೀರಿನ ಡಿಸ್ಪೆನ್ಸರ್ ಫಿಲ್ಟರ್ಗಳನ್ನು ಬಳಸುವಂತೆ ಸಲಹೆ ನೀಡಿದೆ. ಫೋಮ್ ಆಹಾರ ಕಂಟೈನರ್ಗಳ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿದ್ದು, ತ್ಯಾಜ್ಯ ನಿರ್ವಹಣೆ, ಪರಿಸರ ಸಂರಕ್ಷಣೆಯ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಹಸಿರು ರಾಜ್ಯವಾಗಿ ಅಭಿವೃದ್ಧಿ ಹೊಂದಿರುವ ಸಿಕ್ಕಿಂ, 2016ರ ಭಾರತದ ಮೊದಲ ಸಂಪೂರ್ಣ ಸಾವಯವ (ಆರ್ಗ್ಯಾನಿಕ್) ರಾಜ್ಯವಾಗಿ ಮಾರ್ಪಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.