ಶ್ರೀನಗರ: ಪಂಡಿತ ಸಮುದಾಯಕ್ಕೆ ಮತ್ತು ನಿವೃತ್ತ ಯೋಧರಿಗೆ ಕಾಶ್ಮೀರದಲ್ಲಿ ಪ್ರತ್ಯೇಕ ಕಾಲೋನಿ ನಿರ್ಮಿಸುವ ಸರ್ಕಾರದ ಯೋಜನೆಗೆ ಅಡ್ಡಗಾಲು ಹಾಕಲು ಪ್ರತ್ಯೇಕತಾವಾದಿಗಳೆಲ್ಲಾ ಒಂದಾಗಿದ್ದಾರೆ.
ರಾಜಕೀಯವಾಗಿ, ಸೈದ್ಧಾಂತಿಕವಾಗಿ ಬೇರೆ ಬೇರೆಯಾಗಿರುವ ಪ್ರತ್ಯೇಕತಾವಾದಿಗಳು 2008ರ ಬಳಿಕ ಇದೇ ಮೊದಲ ಬಾರಿಗೆ ಒಟ್ಟು ಸೇರಿದ್ದಾರೆ.
ವರದಿಯ ಪ್ರಕಾರ ಪ್ರತ್ಯೇಕತಾವಾದಿ ನಾಯಕರಾದ ಸೈಯದ್ ಅಲಿ ಷಾ ಗಿಲಾನಿ, ಮಿರ್ವಾಝ್ ಉಮರ್ ಫಾರೂಖ್, ಯಾಸೀನ್ ಮಲಿಕ್ ಸೋಮವಾರ ಸಭೆ ಸೇರಿದ್ದು, ಪಿಡಿಪಿ-ಬಿಜೆಪಿ ಸರ್ಕಾರದ ಉದ್ದೇಶಿತ ಕಾಲೋನಿ ನಿರ್ಮಾಣದ ವಿರುದ್ಧ ಹೋರಾಟ ನಡೆಸಲು ತಂತ್ರಗಾರಿಕೆ ರೂಪಿಸಿದ್ದಾರೆ.
ಶ್ರೀನಗರದ ಹೈದರ್ಪೋರದಲ್ಲಿನ ಗಿಲಾನಿ ಮನೆಯಲ್ಲಿ ಸುಮಾರು 90 ನಿಮಿಷಗಳ ಕಾಲ ಸಭೆ ನಡೆದಿದೆ ಎನ್ನಲಾಗಿದೆ. ಈ ಮೂರು ಬೇರೆ ಬೇರೆ ಪ್ರತ್ಯೇಕತಾವಾದಿ ಸಂಘಟನೆಗಳ ಮುಖಂಡರು 2008ರ ಬಳಿಕ ಇದೇ ಮೊದಲ ಬಾರಿಗೆ ಒಟ್ಟು ಸೇರಿದ್ದಾರೆ.
ನಿರಾಶ್ರಿತರಾಗಿರುವ ಕಾಶ್ಮೀರಿ ಪಂಡಿತರಿಗೆ, ನಿವೃತ್ತ ಯೋಧರಿಗೆ ಕಾಲೋನಿ ನಿರ್ಮಿಸುವ ಮಹತ್ವದ ಯೋಜನೆ ಕೇಂದ್ರದ ಮುಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.