ಜಮ್ಮು: ವಿದ್ಯಾರ್ಥಿ ಸಂಘಟನೆ ಎಬಿವಿಪಿಗೆ ಜಮ್ಮು ವಿಶ್ವವಿದ್ಯಾನಿಲಯದಲ್ಲಿ ನಿರ್ಬಂಧವನ್ನು ಹೇರಲಾಗಿದೆ. ಇದನ್ನು ಖಂಡಿಸಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಬಿಜೆಪಿ ಇದರ ವಿರುದ್ಧ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರಿಗೆ ದೂರನ್ನು ನೀಡಿದೆ.
ಆದರೆ ಕೇವಲ ಎಬಿವಿಪಿ ಮಾತ್ರವಲ್ಲ, ರಾಜಕೀಯಕ್ಕೆ ಸಂಬಂಧಿಸಿದ ಎಲ್ಲಾ ಸಂಘಟನೆಗಳಿಗೂ ನಿರ್ಬಂಧ ಹೇರಲಾಗಿದೆ ಎಂದು ವಿಶ್ವವಿದ್ಯಾಲಯದ ಉಪ ಕುಲಪತಿ ಆರ್ಡಿ ಶರ್ಮಾ ತಿಳಿಸಿದ್ದಾರೆ.
ಮಾರ್ಚ್ ತಿಂಗಳಿನಿಂದ ಎಬಿವಿಪಿಗೆ ವಿಶ್ವವಿದ್ಯಾಲಯದಲ್ಲಿ ನಿರ್ಬಂಧವನ್ನು ಹೇರಲಾಗಿದೆ, ರಕ್ತದಾನ ಶಿಬಿರ ಏರ್ಪಡಿಸಲು ಅವಕಾಶ ನೀಡಲಾಗಿಲ್ಲ ಎನ್ನಲಾಗಿದೆ.
ಆದರೆ ನಾವು ಎಲ್ಲಾ ರಾಜಕೀಯ ಸಂಬಂಧಿತ ಸಂಘಟನೆಗಳಿಗೆ ನಿರ್ಬಂಧ ಹೇರಿದ್ದೇವೆ, ಎಲ್ಲರೂ ನಮಗೆ ಸಹಕರಿಸಿದ್ದಾರೆ. ಆದರೆ ಎಬಿವಿಪಿ ಸಹಕರಿಸುತ್ತಿಲ್ಲ ಎಂದು ಶರ್ಮಾ ಆರೋಪಿಸಿದ್ದಾರೆ.
ಆದರೆ ಇದನ್ನು ಬಿಜೆಪಿ ಕಟುವಾಗಿ ಖಂಡಿಸಿದ್ದು, ಕೇವಲ ಜಮ್ಮುವಿನಲ್ಲಿ ಮಾತ್ರ ಎಬಿವಿಪಿಯಿಲ್ಲ, ಎಲ್ಲಾ ವಿಶ್ವವಿದ್ಯಾಲಯದಲ್ಲೂ ಅದು ಇದೆ. ವಿದ್ಯಾರ್ಥಿ ಸಂಘಟನೆ ಇರುವುದು ವಿದ್ಯಾರ್ಥಿಗಳಿಗಾಗಿ, ಜಮ್ಮು ವಿಶ್ವವಿದ್ಯಾಲಯ ಮೊದಲು ತನ್ನ ಕ್ರಮವನ್ನು ಹಿಂಪಡೆಯಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.