ನವದೆಹಲಿ: ಈ ಬಾರಿಯ ಹಣಕಾಸು ವರ್ಷದಿಂದ ತೆರಿಗೆ ಪಾವತಿಸದವರ ಮುಖಕ್ಕೆ ಮಸಿ ಬಳಿಯುವ ನಿಟ್ಟಿನಲ್ಲಿ ನೂತನ ’ನೇಮ್ ಆಂಡ್ ಶೇಮ್’ ಅಭಿಯಾನಕ್ಕೆ ಚಾಲನೆ ನೀಡಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ.
1 ಕೋಟಿಗಿಂತ ಹೆಚ್ಚು ತೆರಿಗೆ ಹಣವನ್ನು ಪಾವತಿ ಮಾಡದ ವ್ಯಕ್ತಿ ಅಥವಾ ಸಂಸ್ಥೆಗಳ ಹೆಸರನ್ನು ದೇಶದ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟಿಸುವ ಕಾರ್ಯಕ್ರಮ ಇದಾಗಿದೆ.
ಕಳೆದ ವರ್ಷದಿಂದ 20-30 ಕೋಟಿಗಿಂತ ಹೆಚ್ಚಿನ ತೆರಿಗೆ ಪಾತಿ ಮಾಡದವರ ಹೆಸರು, ಅಡ್ರೆಸ್, ಪಾನ್ ವಿವರಗಳನ್ನು ಪತ್ರಿಕೆಗಳಲ್ಲಿ ಪ್ರಕಟ ಮಾಡಲಾಗುತ್ತಿತ್ತು. ಇದೀಗ ಒಂದು ಕೋಟಿ ಪಾವತಿ ಮಾಡದಿದ್ದರೂ ಹೆಸರು ಪತ್ರಿಕೆಯಲ್ಲಿ ಪ್ರಕಟವಾಗಲಿದೆ.
ವೈಯಕ್ತಿಕ, ಕಾರ್ಪೊರೇಟ್ ಟ್ಯಾಕ್ಸ್ಪೇಯರ್ ಹೀಗೆ ಎಲ್ಲಾ ಕೆಟಗರಿಯ ತೆರಿಗೆ ಪಾವತಿಸದವರ ಹೆಸರು ಮುಂದಿನ ಜುಲೈ 31ರೊಳಗೆ ಪ್ರಕಟವಾಗಲಿದೆ. ತೆರಿಗೆ ಪಾವತಿಸದವರು ಈಗಲಾದರು ಎಚ್ಚೆತ್ತುಕೊಳ್ಳುವುದು ಒಳಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.