ನವದೆಹಲಿ: ಇಂಡಿಯನ್ ಮ್ಯೂಸಿಯಂನ ಪ್ರಸಿದ್ಧ ಗಾಂಧಾರ ಶಿಲ್ಪಕಲೆಗಳು ಸೇರಿದಂತೆ ಬೌದ್ಧ ಕಲಾಕೃತಿಗಳ ಅಮೂಲ್ಯ ಸಂಗ್ರಹಗಳ ಚಿತ್ರ ಗ್ಯಾಲರಿಗಳು 360 ಡಿಗ್ರಿ ವಿಹಿಂಗಮ (panoramic viewing) ವೀಕ್ಷಣೆಗೆ ಲಭ್ಯವಾಗಲಿದೆ.
ಜಗತ್ತಿನಾದ್ಯಂತ ಕಲಾಪ್ರೇಮಿಗಳಿಗೆ ಕಲಾಕೃತಿಗಳನ್ನು ವೆಬ್ಸೈಟ್ನಲ್ಲಿ ಅನ್ವೇಷಿಸಲು ಅನುಮತಿಸುವ ಗೂಗಲ್ ಕಲ್ಚರಲ್ ಇನ್ಸ್ಟಿಟ್ಯೂಟ್ ಸಹಯೋಗದೊಂದಿಗೆ ಇಂಡಿಯನ್ ಮ್ಯೂಸಿಯಂ ಜಂಟಿಯಾಗಿ ತನ್ನ ಇ-ಆವೃತ್ತಿಯ ಕಲಾಪ್ರದರ್ಶನ ’ಇಂಡಿಯನ್ ಬುದ್ಧಿಸ್ಟ್ ಆರ್ಟ್’ನ್ನು ಬುಧವಾರ ಅನಾವರಣಗೊಳಿಸಲಿದೆ.
ಸಾರನಾಥ್ನ 5ನೇ ಶತಮಾನದ ಬುದ್ಧನ ತಲೆಯಾಕೃತಿಯ ಕಲಾಕೃತಿ ಹಾಗೂ ಇತರ ಬೌದ್ದ ಶಿಲ್ಪಕಲೆಗಳು 360 ಡಿಗ್ರಿ ವಿಹಿಂಗಮ ವೀಕ್ಷಣೆಗೆ ಆನ್ಲೈನ್ನಲ್ಲಿ ಲಭ್ಯವಿದೆ ಎಂದು ಇಂಡಿಯನ್ ಮ್ಯೂಸಿಯಂನ ನಿರ್ದೇಶಕ ಜಯಂತ್ ಸೇನ್ಗುಪ್ತ ಹೇಳಿದ್ದಾರೆ.
200 ವರ್ಷಗಳಷ್ಟು ಹಳೆಯ ಇಂಡಿಯನ್ ಮ್ಯೂಸಿಯಂ ಏಷ್ಯಾದ ಅತಿ ದೊಡ್ಡ ಬಹುಪಯೋಗಿ ವಸ್ತುಸಂಗ್ರಹಾಲಯವಾಗಿದೆ. ಬುದ್ಧ ಸ್ಥೂಪ, ಶೋಕ ಸ್ತಂಭ, ಪೂವ ಇತಿಹಾಸ ಕಾಲದ ಪ್ರಾಣಿಗಳ ಪಳೆಯುಳಿಕೆ, ಭಾರತ ಹಾಗೂ ಉಪಖಂಡಗಳ 52,000 ನಾಣ್ಯಗಳು ಇಲ್ಲಿ ಸಂಗ್ರಹಿಸಿಡಲಾಗಿದೆ.
ಈ ವರ್ಷಾಂತ್ಯದೊಳಗೆ ಮ್ಯೂಸಿಯಂನ ಕಲಾಕೃತಿಗಳು ಸಂಪೂರ್ಣವಾಗಿ ಆನ್ಲೈನ್ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ಜಯಂತ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.