ನವದೆಹಲಿ: ರಫೆಲ್ ಜೆಟ್ ಏರ್ಕ್ರಾಫ್ಟ್ನ ಖರೀದಿಗೆ ಸಂಬಂಧಿಸಿದಂತೆ ದರ ಕಡಿಮೆಗೊಳಿಸುವ ಚರ್ಚೆಯ ಕೊನೆಯ ಹಂತದಲ್ಲಿದ್ದೇವೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಈ ಪ್ರಕ್ರಿಯೆ ಸದ್ಯದಲ್ಲೇ ಅಂತಿಮಗೊಳ್ಳಲಿದೆ ಎಂದಿರುವ ಅವರು, ಸರ್ಕಾರ ಭಾರತದ ರಕ್ಷಣಾ ಆಮದು ಅವಲಂಬನೆಯನ್ನು ಮೇಕ್ ಇನ್ ಇಂಡಿಯಾ ಯೋಜನೆಯಡಿ ಮುಂದಿನ 5ರಿಂದ 6 ವರ್ಷದಲ್ಲಿ ಸದ್ಯ ಇರುವ ಶೇ.60-65ಕ್ಕಿಂತ ಶೇ.೪೦ಕ್ಕೆ ಇಳಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ.
ತನ್ನ ಸಚಿವಾಲಯವು ರಕ್ಷಣಾ ಪರಿಕರಗಳ ನಿಯೋಜನೆಯಲ್ಲಿನ ಅಡೆತಡೆಗಳನ್ನು ಪಾರದರ್ಶಕತೆಯ ಮೂಲಕ ತೊಡೆದು ಹಾಕಲು ಪ್ರಯತ್ನಿಸಿದೆ. ಹೊಸ ರಕ್ಷಣಾ ನೀತಿಯ ಅನ್ವಯ ರಕ್ಷಣಾ ನಿಯೋಜನೆ ನಡೆದ ಒಂದು ವರ್ಷದಲ್ಲೇ ಅದರ ಪ್ರಭಾವ ಗೋಚರಿಸಲ್ಪಡುತ್ತದೆ ಎಂದಿದ್ದಾರೆ.
ಈ ನಿಯಮವು ಮೇಕ್ ಇನ್ ಇಂಡಿಯಾದ ಮೂಲಕ ದೇಶೀಯತೆಯನ್ನು ಪ್ರಚುರ ಪಡಿಸುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.