ವಿಶ್ವಸಂಸ್ಥೆ: ಸಮುದ್ರದ ಮಟ್ಟ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ 2050ರ ವೇಳೆಗೆ ಸುಮಾರು 40 ಮಿಲಿಯನ್ ಭಾರತೀಯರ ಬದುಕು ಅಪಾಯಕ್ಕೆ ಒಳಗಾಗಲಿದೆ, ಶರ ವೇಗದ ನಗರೀಕರಣ ಮತ್ತು ಆರ್ಥಿಕ ಪ್ರಗತಿಯಿಂದಾಗಿ ಮುಂಬಯಿ, ಕೋಲ್ಕತ್ತಾ ಕರಾವಳಿ ಪ್ರದೇಶಗಳಲ್ಲಿ ಭವಿಷ್ಯದಲ್ಲಿ ನೆರೆಯ ಅಪಾಯ ಹೆಚ್ಚಾಗಲಿದೆ ಎಂದು ವಿಶ್ವಸಂಸ್ಥೆಯ ಪರಿಸರ ವರದಿ ಎಚ್ಚರಿಸಿದೆ.
ಹವಮಾನ ವೈಪರೀತ್ಯದ ದುಷ್ಪರಿಣಾಮಗಳು ಪೆಸಿಫಿಕ್, ದಕ್ಷಿಣ ಮತ್ತು ಆಗ್ನೇಯ ಏಷ್ಯಾಗಳಲ್ಲಿ ಹೆಚ್ಚಿನ ರೀತಿಯಲ್ಲಿ ಬಾಧಿಸಲಿದೆ. 2050ರ ವೇಳೆಗೆ ಮಾನವ ಕುಲ ಅಪಾಯಕ್ಕೆ ಒಳಗಾಗಲಿದ್ದು, ಏಷ್ಯಾ ಪೆಸಿಫಿಕ್ನ 10 ದೇಶಗಳು ತೊಂದರೆಗೊಳಗಾಗಲಿದೆ ಎಂದು ಗ್ಲೋಬಲ್ ಎನ್ವಾರ್ಮೆಂಟ್ ಔಟ್ಲುಕ್ ತಿಳಿಸಿದೆ.
ಭಾರತದ ಅತೀ ಹೆಚ್ಚು ಅಂದರೆ ಸುಮಾರು 40 ಮಿಲಿಯನ್ ಜನ ಅಪಾಯದಲ್ಲಿ ಸಿಲುಕಲಿದ್ದಾರೆ. 25ಮಿಲಿಯನ್ ಬಾಂಗ್ಲಾದೇಶಿಯರು, 20 ಮಿಲಿಯನ್ ಚೀನಿಯರು, 15 ಮಿಲಿಯನ್ ಫಿಲಿಫೈನ್ ಜನತೆ ಅಪಾಯಕ್ಕೆ ಒಳಗಾಗಲಿದ್ದಾರೆ ಎಂದು ವರದಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.