ಲಾಹೋರ್: 2008 ರ ಮುಂಬಯಿ ದಾಳಿಯ ಆರೋಪಿ ಎಲ್ಇಟಿ ಕಮಾಂಡರ್ ಝಾಕಿ ಉರ್ ರೆಹ,ಆನ್ ಲಖ್ವಿ ಮತ್ತು ಇತರ 6 ಆರೋಪಿಗಳ ವಿರುದ್ಧ ಕ್ರಮ ಜರುಗಿಸಲು ಕೊನೆಗೂ ಪಾಕಿಸ್ಥಾನದ ನ್ಯಾಯಾಲಯ ಮುಂದಾಗಿದೆ.
ಮುಂಬಯಿ ದಾಳಿಯಲ್ಲಿ ಸತ್ತ 166 ವ್ಯಕ್ತಿಗಳ ಕೊಲೆಯ ಪ್ರಕರಣವನ್ನು ವೈಯಕ್ತಿಕವಾಗಿ ಈ 7 ಮಂದಿಯ ಮೇಲೆ ಹೊರಿಸುವಂತೆ ಪಾಕಿಸ್ಥಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಶನಿವಾರ ತೀರ್ಪು ನೀಡಿದೆ.
ಆದರೆ ಈ ವಿಷಯದಲ್ಲಿ ಆರೋಪಿಗಳ ಮರು ಪರಿಶೀಲನೆ ನಡೆಸಲು ಕೋರ್ಟ್ ಅನುಮತಿಯನ್ನು ನೀಡಿಲ್ಲ.
ಮುಂಬಯಿ ದಾಳಿಯಲ್ಲಿ ಆರು ಅಮೆರಿಕನ್ನರು ಸೆರಿದಂತೆ ಒಟ್ಟು 166 ಮಂದಿ ಮೃತರಾಗಿದ್ದರು, 300 ಮಂದಿ ಗಾಯಗೊಂಡಿದ್ದರು.
ಇದೀಗ ನ್ಯಾಯಾಲಯದ ತೀರ್ಪಿನಂತೆ ಸತ್ತ ಪ್ರತಿಯೊಬ್ಬರ ಹತ್ಯೆ ಪ್ರಕರಣವನ್ನು ಈ 7 ಮಂದಿ ಆರೋಪಿಗಳ ಮೇಲೆ ವೈಯಕ್ತಿಕವಾಗಿ ಹೊರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.