ಅಹ್ಮದಾಬಾದ್: ಭಾರತದ ಪೂರ್ವ, ದಕ್ಷಿಣ ಭಾಗ ಸೈಕ್ಲೋನ್ ರೋನು ಆತಂಕಕ್ಕೆ ಒಳಗಾಗಿದ್ದರೆ, ಅತ್ತ ಉತ್ತರ ಮತ್ತು ಪಶ್ಚಿಮ ಭಾಗ ಬಿಸಿಲಿನ ಬೇಗೆಗೆ ತತ್ತರಿಸಿ ಹೋಗಿದೆ.
ಗುಜರಾತ್ ಈ ಬಾರಿ 100 ವರ್ಷಗಳಲ್ಲೇ ಕಂಡರಿಯದ ತಾಪಮಾನವನ್ನು ಎದುರಿಸುತ್ತಿದ್ದು, ಅಹ್ಮದಾಬಾದ್ನ ಮರ್ಕ್ಯುರಿ ಮಟ್ಟ 48 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಈ ಮೂಲಕ 100 ವರ್ಷಗಳ ದಾಖಲೆಯನ್ನು ಮುರಿದಿದೆ.
ದಾಖಲೆಗಳ ಪ್ರಕಾರ 1916ರಲ್ಲಿ ಅಹ್ಮದಾಬಾದ್ನಲ್ಲಿ ತಾಪಮಾನ 47.8 ಡಿಗ್ರಿ ಸೆಲ್ಸಿಯಸ್ ತಲುಪಿತ್ತು, ಅಲ್ಲಿಂದ ಈ ಬಾರಿ 48 ಡಿಗ್ರಿ ತಲುಪಿದೆ.
ಗುರುವಾರ ಬಿಸಿಲ ಬೇಗೆಗೆ ಅಲ್ಲಿ ಒರ್ವ ವ್ಯಕ್ತಿ ಮೃತನಾಗಿದ್ದಾನೆ. ಈ ಮೂಲಕ ಬಿಸಿಲಿಗೆ ಸತ್ತವರ ಒಟ್ಟು ಸಂಖ್ಯೆ ಅಲ್ಲಿ 4 ಕ್ಕೆ ಏರಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.