ನವದೆಹಲಿ : ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಯನ್ ಮುಜಾಹಿದ್ದೀನ್ ಉಗ್ರ ಅಬ್ದುಲ್ ವಾಹೀದ್ ಸಿದ್ಧಿ ಬಾಪಾನನ್ನು ಇಂದು ಎನ್ಐಎ ಬಂಧಿಸಿದೆ.
ಉಗ್ರ ಯಾಸಿನ್ ಭಟ್ಕಳ್ ಸಹಚರನಾದ ಬಾಪಾ, ಖಾನ್ ಎಂಬ ಹೆಸರಿನಿಂದ ಕಾರ್ಯಾಚರಿಸುತ್ತಿದ್ದ. ಹಲವು ಸ್ಫೋಟಗಳಲ್ಲಿ ಈತ ಅಪರಾಧಿಯಾಗಿದ್ದಾನೆ. 2006 ರ ಮುಂಬೈ ಸರಣಿ ಸ್ಫೋಟ, 2008 ರ ದೆಹಲಿ ಸ್ಫೋಟ ಮತ್ತು 2010 ರ ಚನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಸ್ಫೋಟಗಳಲ್ಲಿ ಈತನ ಕೈವಾಡವಿದೆ.
ಉಗ್ರ ಸಂಘಟನೆಗಳ ಕೃತ್ಯಗಳಿಗೆ ಈತ ಹಣದ ಪೂರೈಕೆ ಮಾಡಿದ್ದು, ದುಬೈನಿಂದ ಕಾರ್ಯಾಚರಿಸುತ್ತಿದ್ದ.
ದುಬೈನಿಂದ ಈತನನ್ನು ಗಡಿಪಾರು ಮಾಡಲಾಗಿದ್ದು, ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಅಲ್ಲದೇ ಈತನನ್ನು ಗಡಿಪಾರು ಮಾಡದಂತೆ ಪಾಕಿಸ್ಥಾನ ಸರಕಾರ ದುಬೈ ಸರಕಾರದ ಮೇಲೆ ಒತ್ತಡವನ್ನು ಹೇರಿತ್ತು. ಆದರೆ ಇದಕ್ಕೆ ಬಾಗದೇ ದುಬೈ ಸರಕಾರ ಈ ಉಗ್ರನನ್ನು ಗಡಿಪಾರು ಮಾಡಿದೆ ಎನ್ನಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.