ನವದೆಹಲಿ : ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗ ಪ್ರಾರಂಭಿಸುವ ಮೊದಲು ‘ಓಂ’ ಕಾರ ಉಚ್ಚಾರಣೆ ಕಡ್ಡಾಯವಲ್ಲ, ಸ್ವಇಚ್ಛೆಯಿಂದ ಹೇಳಬಹುದು ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ.
ಆಯುಷ್ ಸಚಿವಾಲಯವು ಅಂತಾರಾಷ್ಟ್ರೀಯ ಯೋಗ ದಿನದಂದು ಯೋಗ ಪ್ರಾರಂಭಿಸುವ 45 ನಿಮಿಷಗಳ ಮುನ್ನ ‘ಓಂ’ಕಾರ ಮತ್ತು ಕೆಲವು ಯೋಗಕ್ಕೆ ಸಂಬಂಧಿಸಿದ ವೇದಮಂತ್ರಗಳನ್ನು ಹೇಳಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ವರದಿ ಮಾಡಲಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಯುಷ್ ಸಚಿವಾಲಯವು, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿವಾದ ಮಾಡುವುದಕ್ಕಾಗಿಯೇ ಈ ರೀತಿ ಹೇಳಿಕೆಗಳು ಕೇಳಿಬರುತ್ತಿವೆ. ‘ಓಂ’ ಕಾರ ಯೋಗದ ಒಂದು ಅವಿಭಾಜ್ಯ ಅಂಗ. ಇದರ ಉಚ್ಚಾರಣೆ ಕಡ್ಡಾಯವಲ್ಲ, ಸ್ವಇಚ್ಛೆಯಿಂದ ಹೇಳುವುದಿದ್ದರೆ ಹೇಳಬಹುದು. ಯಾರಾದರೂ ‘ಓಂ’ಕಾರ ಉಚ್ಚರಿಸದೆ ಸುಮ್ಮನೆ ಮೌನವಾಗಿದ್ದರೂ ಅವರನ್ನೇನೂ ಯಾರೂ ಕೇಳುವುದಿಲ್ಲ ಎಂದು ಆಯುಷ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಅನಿಲ್ ಕುಮಾರ್ ಗನೇರಿವಾಲಾ ಹೇಳಿದ್ದಾರೆ.
ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನದಂದು ಕೆಲವು ನೂತನ ಯೋಗಾಸನಗಳು ಮತ್ತು ಧ್ಯಾನ, ಪ್ರಾಣಾಯಾಮವನ್ನು 10 ನಿಮಿಷ ಹೆಚ್ಚಾಗಿ ಮಾಡಲಾಗುವುದು ಎಂದು ಗನೇರಿವಾಲಾ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.