ನವದೆಹಲಿ: ಎಲ್ಲರ ಅಚ್ಚುಮೆಚ್ಚಿನ ಅಪ್ಲಿಕೇಶನ್ ಆಗಿರುವ ವಾಟ್ಸ್ಆ್ಯಪ್ಗಿಂತಲೂ ಮುಂದುವರಿದ ವೈಶಿಷ್ಟ್ಯವನ್ನು ಹೊಂದಲು ಟೆಲಿಗ್ರಾಂ ಆ್ಯಪ್ ಯೋಜನೆ ರೂಪಿಸಿದೆ.
ಬಳಕೆದಾರರು ವೈಯಕ್ತಿಕವಾಗಿ ಅಥವಾ ಒಂದು ಗ್ರೂಪ್ಗೆ ಕಳುಹಿಸಿದ ಸಂದೇಶಗಳನ್ನು ತಿದ್ದುಪಡಿ (ಎಡಿಟ್) ಮಾಡಲು ಅನುಮತಿಸುತ್ತದೆ ಎಂದು ಟೆಲಿಗ್ರಾಂ ಘೋಷಿಸಿದೆ. ಆದರೆ ಜಗತ್ತಿನಾದ್ಯಂತ 1 ಬಿಲಿಯನ್ಗೂ ಅಧಿಕ ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ ಒಡೆತನದ ವ್ಯಾಟ್ಸ್ಆ್ಯಪ್ ಈ ಅವಕಾಶವನ್ನು ಒದಗಿಸಿಲ್ಲ.
ಟೆಲಿಗ್ರಾಂ ಸುಮಾರು 100 ಮಿಲಿಯನ್ ಬಳಕೆದಾರರನ್ನು ಹೊಂದಿದೆ.
ವೈಯಕ್ತಿಕವಾಗಿ ಅಥವಾ ಗ್ರೂಪ್ಗೆ ಕಳುಹಿಸಿದ ಸಂದೇಶಗಳನ್ನು ಟ್ಯಾಪ್ ಮಾಡಿ ’ಎಡಿಟ್ ಮಾಡಬಹುದು. ಇನ್ನು ಕಂಪ್ಯೂಟರ್ಗಳಲ್ಲೂ ಈ ಸಂದೇಶಗಳನ್ನು ‘up’ ಎಂದು ಸೂಚಿಸುವ ಬಟನ್ ಬಳಸುವ ಮೂಲಕ ಸಂಪಾದಿಸಬಹುದು ಎಂದು ಅದು ಹೇಳಿದೆ.
ಅಲ್ಲದೇ ಇತರರನ್ನು ಉಲ್ಲೇಖಿಸುವ (mension) ವೈಶಿಷ್ಟ್ಯವನ್ನೂ ಕಲ್ಪಿಸಲಾಗಿದೆ ಎಂದು ಟೆಲಿಗ್ರಾಂ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.