ಮೊಹಾಲಿ : ಕ್ಯಾನ್ಸರ್ ಪೀಡಿತ ಮಕ್ಕಳೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದ ಯುವರಾಜ್ ಸಿಂಗ್ ಮತ್ತೊಮ್ಮೆ ಒಂದೇ ಓವರ್ನಲ್ಲಿ ಆರು ಸಿಕ್ಸರ್ಗಳನ್ನು ಬಾರಿಸುದಾಗಿ ಮಕ್ಕಳಿಗೆ ಭರವಸೆ ನೀಡಿದ್ದಾರೆ.
ಅವರು ಪಿಸಿಎ ಸ್ಟೇಡಿಯಂಗೆ ಆಗಮಿಸಿದ್ದ 7-8 ವರ್ಷದ ಕ್ಯಾನ್ಸರ್ ಪೀಡಿತ ಸುಮಾರು 17 ಮಕ್ಕಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವರಾಜ್ ಮಕ್ಕಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರು. ಚಂಡೀಗಢದ ಬಾಲಕನೋರ್ವ ಮತ್ತೊಮ್ಮೆ ಸಿಕ್ಸರ್ ಬಾರಿಸುವಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯುವಿ ‘ನೀನು ನನಗಾಗಿ ಪ್ರಾರ್ಥನೆ ಮಾಡು, ನಾನು ಮತ್ತೊಮ್ಮೆ ಒಂದು ಓವರ್ನಲ್ಲಿ ಆರು ಸಿಕ್ಸರ್ಗಳನ್ನು ಬಾರಿಸುತ್ತೇನೆ’ ಎಂದರು.
ಕ್ಯಾನ್ಸರ್ ಪೀಡಿತ ಮಕ್ಕಳನ್ನು ಕುರಿತು ಮಾತನಾಡಿದವ ಯುವಿ, ಕ್ಯಾನ್ಸರ್ ನೊಂದಿಗಿನ ಹೋರಾಟ ನಾವು ಜೀವನವನ್ನು ಲಘುವಾಗಿ ಪರಿಗಣಿಸದಂತೆ ಮಾಡುತ್ತದೆ. ಎಂದೆಂದೂ ನಾವು ನಮ್ಮ ಕುಟುಂಬ ಮತ್ತು ಸ್ನೇಹಿತರನ್ನು ಲಘುವಾಗಿ ಪರಿಗಣಿಸಬಾರದು. ಕ್ಯಾನ್ಸರ್ ವಿರುದ್ಧ ಧೈರ್ಯಗೆಡದೆ ಹೋರಾಡಿ ಜೀವನವನ್ನು ರೂಪಿಸಿಕೊಳ್ಳಿ. ಎಂದಿಗೂ ಎದೆಗುಂದದಿರಿ’ ಎನ್ನುವ ಸಲಹೆ ಮಾತುಗಳನ್ನಾಡಿದರು.
ಯುವರಾಜ್ ಸಿಂಗ್ ಮೊದಲ ಟಿ20 ವಿಶ್ವಕಪ್ನಲ್ಲಿ ಒಂದೇ ಓವರ್ನಲ್ಲಿ ಆರು ಎಸೆತೆಗಳನ್ನು ಸಿಕ್ಸರ್ ಸಿಡಿಸಿದ್ದರು. ಸ್ವತಃ ಕ್ಯಾನ್ಸರ್ ಪೀಡಿತರಾಗಿದ್ದ ಯುವರಾಜ್ ಸಿಂಗ್ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿ ಗುಣಮುಖರಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.