ನವದೆಹಲಿ : ಭಾರತೀಯ ರೈಲ್ವೆ ಇಲಾಖೆಯ ಇ-ಕೆಟರಿಂಗ್ ಸೌಲಭ್ಯದಡಿಯಲ್ಲಿ ಊಟ-ತಿಂಡಿ ಪಡೆಯಲು ಕನಿಷ್ಠ ರೂ. 300 ಬೆಲೆ ಅಥವಾ ಅದಕ್ಕಿಂತಲೂ ಜಾಸ್ತಿ ಮೊತ್ತ ಆಗುವ ಆಹಾರವನ್ನು ಪ್ರೀ ಪೇಯ್ಡ್ ಆರ್ಡರ್ ಮಾಡಿದರೆ ಶೇ. 50 ರಷ್ಟು ಹಣ ವಾಪಸ್ ನೀಡುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ.
ಈ ಸೌಲಭ್ಯವನ್ನು IRCTC ಯ ಇ-ಕೆಟರಿಂಗ್ ವೆಬ್ಸೈಟ್ನಲ್ಲಿ ಮೇ 13 ರಿಂದ ಪ್ರಾರಂಭಿಸಲಾಗಿದೆ ಎಂದು IRCTC ಯ ಸಿಎಂಡಿ ಎ. ಕೆ. ಮನೋಚಾ ಅವರು ಹೇಳಿದ್ದಾರೆ.
ಕ್ಯಾಶ್ ಬ್ಯಾಕ್ ಸೌಲಭ್ಯವು ಷರತ್ತಿಗೊಳಪಟ್ಟಿದ್ದು, ಒಂದೇ ಆರ್ಡರ್ನಲ್ಲಿ ರೂ. 300 ಬೆಲೆಯ ಆಹಾರವನ್ನು IRCTC ಯ ಇ-ಕೆಟರಿಂಗ್ ವೆಬ್ಸೈಟ್ www. ecatering.irctc.co.in ಅಥವಾ “Food on Track” ಮೊಬೈಲ್ ಆ್ಯಪ್ ಮೂಲಕ ಪ್ರೀ ಪೇಯ್ಡ್ ಆರ್ಡರ್ ಮಾಡಿದವರಿಗೆ ಮಾತ್ರ ಲಭ್ಯವಿರುತ್ತದೆ. ಬೇರೆ ಯಾವುದೋ ವೆಬ್ಸೈಟ್ ಅಥವಾ ಇನ್ನಿತರ ಆ್ಯಪ್ ಇಂದ ಆರ್ಡರ್ ಮಾಡಿದರೆ ಅವುಗಳನ್ನು ಪರಿಗಣಿಸಲಾಗುವುದಿಲ್ಲ. ಕ್ಯಾಶ್ ಬ್ಯಾಕ್ ಮೊತ್ತವನ್ನು ಆರ್ಡರ್ ದಿನಾಂಕದಂದು ಆಹಾರ ವಿತರಣೆ ನಂತರ ಆರ್ಡರ್ ಮಾಡಿದವರ ಖಾತೆಗೆ ಪಾವತಿ ಮಾಡಲಾಗುವುದು. ನಂತರ ಪ್ರಯಾಣಿಕರಿಗೆ ಈ ಕುರಿತು IRCTC ವತಿಯಿಂದ ಮಾಹಿತಿ ನೀಡಲಾಗುವ ಸೌಲಭ್ಯವನ್ನೂ ಕಲ್ಪಿಸಿದೆ. ಈ ರೀತಿಯ ಸೌಲಭ್ಯದಿಂದ ರೈಲ್ವೆ ಇಲಾಖೆಯ ಇ-ಕೆಟರಿಂಗ್ ವ್ಯವಸ್ಥೆ ಉತ್ತಮಗೊಳ್ಳುತ್ತದೆ ಎಂದು IRCTC ಯ ಸಿಎಂಡಿ ಎ. ಕೆ. ಮನೋಚಾ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.