ನವದೆಹಲಿ: ಕೇಂದ್ರ ಗೃಹಸಚಿವಾಲಯದ ಕಾರ್ಯದರ್ಶಿ ಅನಂದ್ ಜೋಶಿ ಅವರನ್ನು ಭಾನುವಾರ ರಾತ್ರಿ ಸಿಬಿಐ ಬಂಧನಕ್ಕೊಳಪಡಿಸಿದೆ.
ಎನ್ಜಿಓಗಳಿಗೆ ಎಫ್ಸಿಆರ್ಎ ನೋಟಿಸ್ ನೀಡಿದ ಹಿನ್ನಲೆಯಲ್ಲಿ ಇವರ ಬಂಧನವಾಗಿದೆ. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಸಿಬಿಐ ಇವರಿಗೆ ಸಮನ್ಸ್ ಜಾರಿಗೊಳಿಸಿತ್ತು.
ವಿಶೇಷ ಅಪರಾಧ ದಳಕ್ಕೆ ಸಮರ್ಥ ಉತ್ತರವನ್ನು ನೀಡಲು ಇವರು ವಿಫಲವಾದ ಹಿನ್ನಲೆಯಲ್ಲಿ ಸಿಬಿಐ ಇವರನ್ನು ವಶಕ್ಕೆ ಪಡೆದುಕೊಂಡಿದೆ. ಎನ್ಜಿಓಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ 2010(ಎಫ್ಸಿಆರ್ಎ) ನೋಟಿಸ್ ನೀಡಿರುವ ಸಂಬಂಧ ಇವರ ವಿರುದ್ಧ ಕ್ರಮ ಜರುಗಿಸಲಾಗಿದೆ.
ಎನ್ಜಿಓಗೆ ಸಂಬಂಧಿಸಿದ ವಿವಿಧ ದಾಖಲೆಗಳನ್ನು ಇವರು ಕಿತ್ತುಕೊಮಡ ಆರೋಪವನ್ನು ಎದುರಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.