ಜೋಧ್ಪುರ: ಸೋಲಾರ್ ಆಧಾರಿತ ರೈಲು ಪ್ರಾಯೋಗಿಕ ಪರೀಕ್ಷೆಗೆ ಸಜ್ಜುಗೊಂಡಿದೆ. ಈ ಮೂಲಕ ಭಾರತೀಯ ರೈಲ್ವೇಯ ಬಹುದಿನಗಳ ಕನಸು ನನಸಾಗುವ ಹಂತಕ್ಕೆ ಬಂದು ತಲುಪಿದೆ.
ಈ ತಿಂಗಳ ಕೊನೆಗೆ ಸೋಲಾರ್ ಆಧಾರಿತ ರೈಲಿನ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುವುದು ಎಂದು ನಾರ್ಥ್ ವೆಸ್ಟರ್ನ್ ರೈಲ್ವೆಯ ಪಿಆರ್ಓ ಗೋಪಾಲ್ ಶರ್ಮಾ ತಿಳಿಸಿದ್ದಾರೆ.
’ಈ ರೈಲನ್ನು ಪ್ರಯಾಣಿಕರ ರೈಲಾಗಿ ಚಲಾವಣೆ ಮಾಡುತ್ತೇವೆ. ಪರೀಕ್ಷೆಯ ಬಳಿಕ ಇದರ ಮಾರ್ಗವನ್ನು ನಿರ್ಧರಿಸಲಾಗುತ್ತದೆ, ಇಂಧನಕ್ಕೆ ಪರ್ಯಾಯವಾಗಿ ಈ ಯೋಜನೆಯನ್ನು ರೈಲ್ವೆ ಜಾರಿಗೆ ತಂದಿದೆ’ ಎಂದಿದ್ದಾರೆ.
ಇಡೀ ರೈಲಿಗೆ ಸೋಲಾರ್ ಪ್ಯಾನಲ್ನ್ನು ಅಳವಡಿಸಲಾಗಿದೆ, ಎಸಿ, ಫ್ಯಾನ್ ಮುಂತಾದ ಎಲ್ಲಾ ರೈಲಿಗೆ ಬೇಕಾದ ಎಲ್ಲಾ ಆಂತರಿಕ ಎಲೆಕ್ಟ್ರಿಸಿಟಿ ಅವಶ್ಯಕತೆಗಳನ್ನು ಸೋಲಾರ್ ಒದಗಿಸುತ್ತದೆ.
ಭಾರತೀಯ ರೈಲ್ವೇಯನ್ನು ಹಸಿರೀಕರಣ ಮಾಡಬೇಕು ಎಂಬ ಮಹಾತ್ವಾಕಾಂಕ್ಷೆಗೆ ಈ ರೈಲು ಮತ್ತಷ್ಟು ಉತ್ತೇಜನ ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.