ಮೆಕ್ಸಿಕೋ: ರಸ್ತೆಗಳಲ್ಲಿ ಬೀದಿ ದೀಪಗಳನ್ನು ಉರಿಸಲು ಬಹಳಷ್ಟು ವಿದ್ಯುತ್ ಹಾಗೂ ಹಣ ಬೇಕಾಗುತ್ತದೆ. ಅದಕ್ಕಾಗಿ ಹಗಲು ಹೊತ್ತಿನಲ್ಲಿ ಸೌರಶಕ್ತಿಯನ್ನು ಹೀರಿಕೊಂಡು, ರಾತ್ರಿ ಹೊತ್ತಿನಲ್ಲಿ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳಿಗೆ ನೈಸರ್ಗಿಕ ಬೆಳಕು ಸೂಸುವ ಸಿಮೆಂಟ್ನ್ನು ಮೆಕ್ಸಿಕೋದಲ್ಲಿರುವ ಸ್ಯಾನ್ ನಿಕೋಲ್ಯಾಸ್ ಹಿಡಾಲ್ಗೊದ ಮಿಷೊಕನ್ ವಿಶ್ವವಿದ್ಯಾಲಯ (ಯುಎಂಎಸ್ಎನ್ಎಚ್)ದ ವಿಜ್ಞಾನಿಗಳು ರಚಿಸಿದ್ದಾರೆ.
ಇಂದು ಸಾಮಾನ್ಯವಾಗಿ ಬಳಸಲಾಗುವ ಪ್ರತಿದೀಪಕ ವಸ್ತುಗಳು ಪ್ಲಾಸ್ಟಿಕ್ನಿಂದ ತಯಾರಿಸಲಾಗುತ್ತಿದ್ದು, 3 ವರ್ಷ ಬಾಳ್ವಿಕೆ ಹೊಂದಿವೆ. ಆದರೆ ಈ ಸಿಮೆಂಟ್ 100 ವರ್ಷಗಳಷ್ಟು ಬಾಳ್ವಿಕೆ ಹೊಂದಿದ್ದು, ವಾಹನ ಚಾಲಕರಿಗೆ ಸರಿಹೊಂದಿಸಿ ಬೆಳಕಿನ ತೀವ್ರತೆಯನ್ನು ನಿಯಂತ್ರಿಸಬಲ್ಲುದು ಎಂದು ಸಂಶೋಧಕರು ಹೇಳಿದ್ದಾರೆ. ಪ್ರಸ್ತುತ ಈ ಸಿಮೆಂಟ್ ನೀಲಿ ಅಥವಾ ಹಸಿರು ಬಣ್ಣದ ಬೆಳಕನ್ನು ಹೊರಸೂಸುತ್ತದೆ.
ಸಾಮಾನ್ಯವಾಗಿ ಸಿಮೆಂಟ್ ಬೆಳಕನ್ನು ತನ್ನ ಆಂತರಿಕ ಭಾಗದಲ್ಲಿ ಪ್ರವೇಶಿಸಲು ಬಿಡುವುದಿಲ್ಲ. ವಿಶ್ವದಾದ್ಯಂತ ಇದಕ್ಕೆ ಸಮನಾದ ಯೋಜನೆ ಇರಲು ಸಾಧ್ಯವಿಲ್ಲದ ಕಾರಣ ಈ ಯೋಜನೆಯನ್ನು ಕೈಗೆತ್ತಿಕೊಂಡು ಸಂಶೋಧನೆ ನಡೆಸಿರುವುದಾಗಿ ಯುಎಂಎಸ್ಎನ್ಎಚ್ನ ಜೋಸ್ ಕಾರ್ಲೋಸ್ ರೂಬಿಯೋ ಹೇಳಿದ್ದಾರೆ.
ಸಾಮಾನ್ಯವಾಗಿ ಸಿಮೆಂಟ್ ಧೂಳಿನ ಕಣಗಳಿದ್ದಂತೆ ಇದ್ದು, ನೀರಿನೊಂದಿಗೆ ಬೆರೆತಾಗ ತಲೆಕೂದಲಿಗೆ ಹಚ್ಚುವ ಜೆಲ್ ಅಂತೆಯೇ ಆಗುತ್ತದೆ. ಈ ಸಂದರ್ಭ ಕೆಲವು ಕ್ರಿಸ್ಟಲ್ ಪದರಗಳ ರಚನೆಯಾಗುತ್ತಿದ್ದು, ಇದು ಅನಗತ್ಯ ಕಣಗಳ ಅಂಶ ಉತ್ಪನ್ನವಾಗುತ್ತವೆ. ಈ ಅನಗತ್ಯ ಅಂಶಗಳನ್ನು ಬೇರ್ಪಡಿಸಿ ಸಂಪೂರ್ಣ ಜೆಲ್ ಮಾದರಿ ರೂಪಿಸಲಾಗುತ್ತದೆ.
ಈ ಜೆಲ್ ಮಾದರಿಯ ಸಿಮೆಂಟ್ ಸೂರ್ಯನ ಬೆಳಕನ್ನು ಹೀರುತ್ತದೆ. ರಾತ್ರಿ ವೇಳೆ ೧೨ ತಾಸುಗಳ ಕಾಲ ಪರಿಸರದಲ್ಲಿ ಬೆಳಕನ್ನು ಹೊರಸೂಸುತ್ತದೆ. ಇದು ಮರಳು, ಧೂಳು ಮತ್ತು ಮಣ್ಣಿನಿಂದ ತಯಾರಿಸಲಾದ ಸಿಮೆಂಟ್ ಜೆಲ್ ಆಗಿದ್ದು, ಪರಿಸರ ಸ್ನೇಹಿಯಾಗಿದೆ ಎಂದು ಡಾ ಜೋಸ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.