ಶ್ರೀನಗರ: ಭೂಮಿಯ ಮೇಲಿನ ಸ್ವರ್ಗ ಎಂದೇ ಕರೆಯಲಾಗುವ ಕಾಶ್ಮೀರ ಸ್ವಿಜರ್ಲ್ಯಾಂಡ್ ನಂತರದ ಎರಡನೇ ರೋಮ್ಯಾಂಟಿಕ್ ಪ್ರವಾಸಿ ತಾಣ ಎಂಬ ಖ್ಯಾತಿ ಪಡೆದಿದೆ. ಪ್ರಮುಖ ಟ್ರಾವೆಲ್ ಮ್ಯಾಗಜಿನ್ ’ಲೋನ್ಲಿ ಪ್ಲಾನೆಟ್’ ಕಾಶ್ಮೀರವನ್ನು ಎರಡನೇ ರೋಮ್ಯಾಂಟಿಕ್ ಪ್ರವಾಸಿ ತಾಣ ಎಂದು ಉಲ್ಲೇಖಿಸಿದೆ.
ಇಲ್ಲಿಯ ಶಾಂತ ವಾತಾವರಣ, ಹಸಿರು ಮರಗಳು, ಸರೋವರಗಳು, ಬೆಟ್ಟ-ಗುಡ್ಡಗಳು ಪ್ರವಾಸಿಗರನ್ನು ಸೆಳೆಯುತ್ತಿದ್ದು, ಶಿಕಾರಾ ದೋಣಿಗಳಲ್ಲಿ ಶ್ರೀನಗರದ ದಾಲ್ ಸರೋವರದ ವಿಹಾರಕ್ಕಾಗಿ ಜನರು ಇಂದಿಗೂ ಇಲ್ಲಿಗೆ ಆಗಮಿಸುತ್ತಾರೆ.
ಜಮ್ಮು-ಕಾಶ್ಮೀರ ಸರ್ಕಾರ ಪ್ರವಾಸಿಗರ ಸುರಕ್ಷಿತ ಹಾಗೂ ಸುಖಕರ ಪ್ರವಾಸಕ್ಕೆ ಶ್ರಮ ವಹಿಸುತ್ತಿದ್ದು, ಶ್ರೀನಗರಕ್ಕೆ ಪ್ರತಿ ನಿತ್ಯ 4000 ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಕಾಶ್ಮೀರದ ಕಣಿವೆಗಳಲ್ಲಿ ಹಲವಾರು ಬಾಲಿವುಡ್ ಸಿನಿಮಾಗಳ ಶೂಟಿಂಗ್ ನಡೆದಿದ್ದು, ಲೋನ್ಲಿ ಪ್ಲಾನೆಟ್ ಕಾಶ್ಮೀರವನ್ನು ’ಅತ್ಯಂತ ರೋಮ್ಯಾಂಟಿಕ್ ಪ್ರವಾಸಿ ತಾಣ’ ಎಂದು ಗುರುತಿಸಿದ್ದು, ಇನ್ನಷ್ಟು ಸಿನಿಮಾಗಳ ಶೂಟಿಂಗ್ ನಡೆಯುವ ಅಂದಾಜು ಮತ್ತು ಪ್ರವಾಸಿಗರ ಹೆಚ್ಚಳದ ಯೋಜನೆ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.