ಬಡಿ: ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿರುವ ಗ್ರಾಮ ಬಡಿ. ಮೇಲ್ನೋಟಕ್ಕೆ ಅಲ್ಲಿ ಅಂತಹ ಸಮಸ್ಯೆ ಇದೆ ಎಂದು ಅನಿಸುವುದಿಲ್ಲ. ಆದರೂ ಅದು ಆತ್ಮಹತ್ಯಾ ಗ್ರಾಮ ಎಂದೇ ಕುಖ್ಯಾತಿಗೆ ಒಳಗಾಗಿದೆ.
ಕಳೆದ 110 ದಿನಗಳಲ್ಲಿ ಈ ಗ್ರಾಮದಲ್ಲಿ 120 ಆತ್ಮಹತ್ಯಾ ಪ್ರಕರಣಗಳು ನಡೆದಿವೆ. ಇವುಗಳಿಗೆ ಕಾರಣಗಳೇನು ಎಂಬುದು ಇದುವರೆಗೆ ತಿಳಿದು ಬಂದಿಲ್ಲ.
ಕಳೆದ ಒಂದು ವರ್ಷದಿಂದ ಖಾರ್ಗೋನ್ನಲ್ಲಿ 381 ಸುಸೈಡ್ಗಳು ನಡೆದಿವೆ. ಇವುಗಳ ಬಗ್ಗೆ ನಿಖರ ತನಿಖೆಗಳು ನಡೆಯದ ಕಾರಣ ಇದರ ಹಿಂದಿನ ಕಾರಣ ಕೂಡ ತಿಳಿಯದಾಗಿದೆ.
ಆದರೆ ದಿನಕ್ಕೊಂದರಂತೆ ಈ ಗ್ರಾಮದಲ್ಲಿ ಆತ್ಮಹತ್ಯೆಗಳು ನಡೆಯುತ್ತಿರುವುದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಗ್ರಾಮದ ಜನತೆ ಕೂಡ ಭಯಭೀತರಾಗಿದ್ದಾರೆ. ಈ ಗ್ರಾಮದ ಜನರಿಗೆ ಹೇಳಿಕೊಳ್ಳಲಾಗದ ಸಮಸ್ಯೆಯಿದೆಯೇ ಅಥವಾ ಅತ್ಮಹತ್ಯೆಗಳೆಲ್ಲ ಕೊಲೆಗಳೇ ಎಂಬ ಅನುಮಾನಗಳೂ ಮೂಡಿವೆ.
ಆದರೂ ಈ ಸಾವುಗಳ ಹಿಂದಿನ ಮರ್ಮವನ್ನು ನಿಖರ ಪೊಲೀಸ್ ತನಿಖೆಯಿಂದ ಅಷ್ಟೇ ಬಯಲು ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಅಲ್ಲಿನ ಆಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ. ಇನ್ನಾದರು ಸಂಭವಿಸುವ ಸಾವಿಗೆ ಬ್ರೇಕ್ ಹಾಕಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.