ನವದೆಹಲಿ: ಅಗಸ್ಟಾವೆಸ್ಟ್ ಲ್ಯಾಂಡ್ ಹಗರಣದ ಸುಳಿಗೆ ಸಿಲುಕಿ ಒದ್ದಾಡುತ್ತಿರುವ ಕಾಂಗ್ರೆಸ್ಗೆ ಇದೀಗ ಮತ್ತೊಂದು ಹಗರಣದ ಅಲೆ ಬಂದು ಅಪ್ಪಳಿಸಿದೆ. ಯುಪಿಎ ಅವಧಿಯಲ್ಲಿ ವಿವಿಐಪಿ ಹೆಲಿಕಾಫ್ಟರ್ ಹಗರಣಕ್ಕಿಂತಲೂ ದೊಡ್ಡ ಹಗರಣವೊಂದು ನಡೆದಿದೆ ಎಂದು ಮಾಧ್ಯಮಗಳ ವರದಿಗಳು ಬಹಿರಂಗಪಡಿಸಿವೆ.
ನೇವಲ್ ಶಿಪ್ನ್ನು (ನೌಕಾ ಹಡಗು) ನಿರ್ಮಿಸಲು ಇಟಾಲಿಯನ್ ಶಿಪ್ ಬಿಲ್ಡಿಂಗ್ ಸಂಸ್ಥೆಗೆ ಇನ್ಫಿರಿಯರ್ ಸ್ಟೀಲ್ಗಳನ್ನು ಸರಬರಾಜು ಮಾಡಿದ ಆರೋಪಕ್ಕೆ ಯುಪಿಎ ಒಳಗಾಗಿದೆ. ಇಂಡಿಯಾ ಟುಡೇ ವರದಿಯ ಪ್ರಕಾರ ನೇವಲ್ ಶಿಪ್ ಹಗರಣ ಅಗಸ್ಟಾವೆಸ್ಟ್ ಲ್ಯಾಂಡ್ಗಿಂತಲೂ ದೊಡ್ಡದಾಗಿರುವ ಸಾಧ್ಯತೆ ಇದೆ.
ಇಟಾಲಿಯನ್ ಸಂಸ್ಥೆ ಭಾರತಕ್ಕೆ ಎರಡು ನಾವೆಲ್ ಟ್ಯಾಂಕರ್ಗಳನ್ನು ನೀಡಿದೆ. ಈ ಸಂಸ್ಥೆಗೆ ಯುಪಿಎ ಸರ್ಕಾರ ಫೇವರ್ಗಳನ್ನು ಮಾಡಿದ ಆರೋಪದ ಬಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆಎಂದು ವರದಿ ತಿಳಿಸಿದೆ.
ಫಿನ್ಕಂಟೀರಿ ಎಂಬ ಇಟಾಲಿಯನ್ ಸಂಸ್ಥೆಗೆ 2009ರಲ್ಲಿ ಎರಡು ನೇವಲ್ ಶಿಪ್ಗಳನ್ನು ನಿರ್ಮಿಸಲು ಯುಪಿಎ ಸರ್ಕಾರ ಫೇವರ್ ಮಾಡಿದೆ, ಟ್ಯಾಂಕರ್ಗಳ ನಿರ್ಮಾಣಕ್ಕೆ ಅದು ಇನ್ಫಿರಿಯರ್ ಗುಣಮಟ್ಟದ ಸ್ಟೀಲ್ಗಳನ್ನೂ ನೀಡಿದೆ ಎಂಬ ಆರೋಪವಿದೆ.
ಈ ಸಂಸ್ಥೆಗೆ ಯುಪಿಎ ನೀಡಿದ ಕಾಂಟ್ರ್ಯಾಕ್ಟ್ಗಳ ಬಗ್ಗೆ ಸರ್ಕಾರ ಈಗಾಗಲೇ ಪರಿಶೀಲನೆ ನಡೆಸುತ್ತಿದೆ.
ನಾವೆಲ್ ಟ್ಯಾಂಕರ್ಗಳ ನಿರ್ಮಾಣಕ್ಕೆ ಈ ಸಂಸ್ಥೆ ವೆಪನ್ಸ್ ಗ್ರೇಡ್ ಸ್ಟೀಲ್ ಬದಲು ಕಮರ್ಷಿಯಲ್ ಗ್ರೇಡ್ ಸ್ಟೀಲ್ ಬಳಸಿದೆ ಎಂಬ ಆರೋಪವೂ ಇದೆ. ಐಎನ್ಎಸ್ ವಿಕ್ರಮಾದಿತ್ಯ ರಷ್ಯಾದಿಂದ ಬರುವ ಸಂದರ್ಭದಲ್ಲೇ ಯುಪಿಎ ಈ ಟ್ಯಾಂಕರನ್ನು ಭಾರತಕ್ಕೆ ಕರೆತರಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.