ಪಾಟ್ನಾ: ಹಿರಿಯ ಪತ್ರಕರ್ತ ರಾಜ್ದೇವ್ ರಂಜನ್ ಅವರನ್ನು ಶುಕ್ರವಾರ ಅಪರಿಚಿತ ಶಸ್ತ್ರಧಾರಿಯೊಬ್ಬ ಶುಕ್ರವಾರ ಗುಂಡಿಕ್ಕಿ ಕೊಲೆ ಮಾಡಿದ್ದಾನೆ.
ಹಿಂದಿ ದಿನಪತ್ರಿಕೆ ’ಹಿಂದೂಸ್ಥಾನ’ದ ಸಿವಾನ್ ಜಿಲ್ಲಾ ಸಂಪಾದಕರಾಗಿ ರಂಜನ್ ಕಾರ್ಯನಿರ್ವಹಿಸುತ್ತಿದ್ದರು. ಇವರನ್ನು ಸಿವಾನ್ ಜಿಲ್ಲೆಯಲ್ಲೇ ಸಂಜೆ ಬೈಕ್ನಲ್ಲಿ ಹೋಗುತ್ತಿದ್ದ ಸಂದರ್ಭ ಮಾರುಕಟ್ಟೆ ಸಮೀಪ ಗುಂಡಿಕ್ಕಿ ಕೊಲೆ ಮಾಡಲಾಗಿದೆ.
ತನ್ನ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ರಂಜನ್ ಸದಾ ಬರೆಯುತ್ತಿದ್ದರು, ಇದೇ ಕಾರಣಕ್ಕೆ ಅವರ ಕೊಲೆ ನಡೆದಿದೆ ಎನ್ನಲಾಗಿದೆ. ಈ ಘಟನೆಯನ್ನು ಖಂಡಿಸಿ ನೂರಾರು ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ ಜಾರ್ಖಾಂಡ್ನಲ್ಲಿ ಅಖಿಲೇಶ್ ಪ್ರತಾಪ್ ಸಿಂಗ್ ಎಂಬ ಟಿವಿ ಪತ್ರಕರ್ತನನ್ನೂ ದುಷ್ಕರ್ಮಿಗಳು ಕಳೆದ ರಾತ್ರಿ ಗುಂಡಿಕ್ಕಿ ಕೊಲೆ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.