ಬೆಂಗಳೂರು : ರಾಜ್ಯಸರಕಾರಕ್ಕೆ ಮೂರನೇ ವಸಂತದ ಸಂಭ್ರಮವಾದರೆ ಒಂದೆಡೆಯಾದರೆ, ಇನ್ನೋಂದೆಡೆ ಕಾರ್ಮಿಕರ ಕಲ್ಯಾಣನಿಧಿ ಯಿಂದ 258 ಕೋಟಿ ರೂ ಅಕಾಡೆಮಿ ಕಟ್ಟಡಕ್ಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.
ವಿಶ್ವೇಶ್ವರಯ್ಯ ತಾಂತ್ರಿಕ ಅಕಾಡೆಮಿ ಈ ಕಟ್ಟಡ ಕಟ್ಟಲು ಸರಿಸುಮಾರಿ 356 ಕೋಟಿ ರೂ ಬೇಕಾಗಿದ್ದು, ಕಾರ್ಮಿಕ ಕಲ್ಯಾಣ ನಿಧಿಯಿಂದ 256 ಕೋಟಿ ಬಳಸಿಕೊಳ್ಳಲಾಗಿದೆ. ಆದರೆ ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ಕಾರ್ಮಿಕ ಕಲ್ಯಾಣ ನಿಧಿಯನ್ನು ಕಾರ್ಮಿಕರ ಭವಿಷ್ಯ ನಿಧಿಗೆ ಬಳಸಬೇಕಾಗಿದ್ದು ಉಳಿದ ವಿಷಯಕ್ಕೆ ಬಳಸುವಂತ್ತಿಲ್ಲ.
ಕಾರ್ಮಿಕ ಇಲಾಖೆ ಹೆಚ್ಚವರಿ ಕಾರ್ಯದರ್ಶಿ ಈ ಭವಿಷ್ಯ ನಿಧಿಯನ್ನು ಬಳಸುವಂತ್ತಿಲ್ಲ. ಅದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೇ ಈ ಅಕಾಡೆಮಿ ಇನ್ನೂ ನೋಂದಾವಣಿಗೊಂಡಿಲ್ಲ. ನೋಂದಾವಣಿಗೊಂಡ ಮೇಲೆ ಅಕಾಡೆಮಿ ಎರಡು ವರ್ಷಗಳ ಕಾಲ ಬಾಡಿಗೆ ಕಟ್ಟಡದಲ್ಲಿ ನಡೆಯಲಿ. ತದ ನಂತರ ಬಜೆಟ್ ಅನುದಾನ ಮೂಲಕ ಕಟ್ಟಡ ಕಟ್ಟಬಹುದು .
ಅಲ್ಲದೇ ಇಂತಹ ಕಾರ್ಯಗಳಿಗೆ ಬಜೆಟ್ ಮೂಲಕ ಹಣ ನೀಡ ಬೇಕಾಗುತ್ತದೆ. ಕಲ್ಯಾಣ ನಿಧಿಯ ಹಣವನ್ನು ಬಳಸುವಂತಿಲ್ಲ ಎಂದೂ ಪತ್ರ ಮೂಖೇನ ತಿಳಿಸಿದ್ದರು. ಆದರೂ ಸಚಿವರು ಈ ಟಿಪ್ಪಣಿ ಮತ್ತು ಪತ್ರವನ್ನು ಸಂಪುಟ ಸಭೆಯಲ್ಲಿರಿಸದೇ ಅದಕ್ಕೆ ಸಮ್ಮತಿ ಪಡೆದಿದ್ದಾರೆ.
ಇತ್ತೀಚಿಗೆ ಕಾರ್ಮಿಕ ನಿಧಿ ಬಗ್ಗೆ ಕೇಂದ್ರ ಸರಕಾರದ ನೀತಿಗೆ ಭಾರಿ ಪ್ರತಿಭಟನೆ ವ್ಯಕ್ತವಾಗಿತ್ತು. ಈಗ ಅದೇ ಹಣವನ್ನು ಬಳಕೆ ಮಾಡಿರುವುದರಿಂದ ಕಾರ್ಮಿಕ ಕ್ಷೇತ್ರದಲ್ಲಿ ತೀತ್ರ ವಿರೋಧ ವ್ಯಕ್ತವಾಗುವ ಸಾಧಯತೆಗಳಿವೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.