ತಿರುವನಂತಪುರಂ : ಸೌರಶಕ್ತಿ ಚಾಲಿತ ಬಲ್ಬ್ಗಳು, ಕಾರು, ಬಸ್ಗಳ ಬಳಿಕ ಈಗ ಬರಲಿದೆ ಸೌರಶಕ್ತಿ ಚಾಲಿತ ದೋಣಿ.
ನವ್ಆಲ್ಟ್ ಸೋಲಾರ್ ಎಂಡ್ ಇಲೆಕ್ಟ್ರಿಕ್ ಬೋಟ್ಸ್ ವಿನ್ಯಾಸಗೊಳಿಸಿ ನಿರ್ಮಿಸಿದ ಸೌರಶಕ್ತಿ ಚಾಲಿತ ದೋಣಿಯನ್ನು ಕೇರಳ ರಾಜ್ಯ ಜಲ ಸಾರಿಗೆ ಇಲಾಖೆ ಕಾರ್ಯಾರಂಭಗೊಳಿಸಲಿದೆ. ಕೊಚ್ಚಿ ಶೀಘ್ರದಲ್ಲೇ ಭಾರತದ ಪ್ರಪ್ರಥಮ ಸೌರಶಕ್ತಿ ಚಾಲಿತ ದೋಣಿಗಳಿಗೆ ಮನೆಯಾಗಲಿದೆ.
ಕೇರಳ ಸರ್ಕಾರ ಮೊದಲ ಬಾರಿ 2013 ರಲ್ಲಿ ಇಂಧನ ಚಾಲಿತ ದೋಣಿಗಳ ಬದಲು ಸೌರಶಕ್ತಿ ಚಾಲಿತ ದೋಣಿಗಳಿಗೆ ಯೋಜನೆ ರೂಪಿಸಿತ್ತು.
ನವ್ಆಲ್ಟ್, ಫ್ರೆಂಚ್ ಕಂಪೆನಿ ಆಲ್ಟೆನ್ ಹಾಗೂ ಭಾರತೀಯ ಕಂಪೆನಿ ನವ್ಗತಿ ಜಂಟಿ ಸಹಯೋಗದಲ್ಲಿ ಇದರ ಗುತ್ತಿಗೆಯನ್ನು ಪಡೆದಿತ್ತು. ಈ ದೋಣಿಯ ಪ್ರಮುಖ ಭಾಗಗಳನ್ನು ಫ್ರಾನ್ಸ್ನಿಂದ ತರಿಸಲಾಗಿದ್ದು, ನವ್ಆಲ್ಟ್ನ ಕೊಚ್ಚಿ ಹಡಗುತಾಣದಲ್ಲಿ ದೋಣಿಯನ್ನು ನಿರ್ಮಿಸಲಾಗಿದೆ.
75 ಆಸಗಳ 20 ಮೀಟರ್ ಉದ್ದದ ಈ ದೋಣಿಗೆ 2 ಎಲೆಕ್ಟ್ರಿಕ್ ಮೋಟಾರ್ಗಳನ್ನು ಅಳವಡಿಸಲಾಗಿದೆ. 20 ಕಿಲೋವ್ಯಾಟ್ ಸೌರ ಘಟಕ ಲೀಥಿಯಂ ಬ್ಯಾಟರಿ ಚಾರ್ಜ್ ಮಾಡಲು ಸಹಕರಿಸುತ್ತದೆ.
ಸೌರಶಕ್ತಿ ಹಾಗೂ ವಿದ್ಯುತ್ಶಕ್ತಿ ಎರಡರಿಂದಲೂ ಚಲಿಸುವ ಈ ದೋಣಿ ಶಬ್ದ ರಹಿತ, ಕಂಪನರಹಿತ ಮತ್ತು ಮಾಲಿನ್ಯರಹಿತವಾಹಿದೆ.
ಸಾಮಾನ್ಯ ಇಂಧನ ಚಾಲಿತ ದೋಣಿಯ ನಿರ್ಮಾಣ ವೆಚ್ಚ 1.5 ಕೋಟಿ ರೂ. ಆಗಿದ್ದರೆ, ಸೌರಶಕ್ತಿ ಚಾಲಿತ ದೋಣಿಯ ನಿರ್ಮಾಣದ ವೆಚ್ಚ 2.2 ಕೋಟಿ ರೂ. ಆಗಿದೆ. ಆದರೆ ಸರ್ಕಾರ ಪ್ರತಿ ವರ್ಷ ಇಂಧನದ ಮೇಲೆ 30 ಲಕ್ಷ ರೂ. ಉಳಿತಾಯ ಮಾಡಬಲ್ಲದು ಎಂದು ನವ್ಗತಿಯ ಸಂದಿತ್ ತಾಂಡಶೆರಿ ಹೇಳುತ್ತಾರೆ.
ಹಿನ್ನೀರಿನಲ್ಲಿ ಚಲಿಸಲಿರುವ ಸೌರಶಕ್ತಿ ಚಾಲಿತ ದೋಣಿಯು ಜುಲೈ ತಿಂಗಳಲ್ಲಿ ಕಾರ್ಯಾರಂಭವಾಗಲಿದ್ದು, ಇದು ಸದ್ಯಕ್ಕೆ ವೈಕಂ-ಥವನಕ್ಕಡವು ಮಾರ್ಗದಲ್ಲಿ 2.5 ಕಿ.ಮೀ. ದೂರವನ್ನು ಸಾಗಲಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.