ಚೆನ್ನೈ: ತಮಿಳುನಾಡು ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ಪ್ರಚಾರದ ವೀಡಿಯೋ ಜಾಹೀರಾತಿನಲ್ಲಿ ಒಬ್ಬರೇ ನಟಿಸಿರುವುದು ಜನರಲ್ಲಿ ಗೊಂದಲ ಸೃಷ್ಟಿಸಿದೆ.
ಎಐಎಡಿಎಂಕೆ ಚುನಾವಣಾ ಪ್ರಚಾರದ ವೀಡಿಯೋ ಜಾಹೀರಾತಿನಲ್ಲಿ ಜಿ.ಟಿ. ಕಸ್ತೂರಿ ಓರ್ವ ವೃದ್ಧೆ ಅಮ್ಮಾ ಕ್ಯಾಂಟೀನ್ ಬಗ್ಗೆ ಪ್ರಚಾರ ಮಾಡುವ ಪಾತ್ರವನ್ನು ವಹಿಸಿದ್ದಾರೆ. ಈ ಜಾಹೀರಾತಿನಲ್ಲಿ ತನ್ನ ಸ್ವಂತ ಮಕ್ಕಳೇ ತನ್ನ ವೃದ್ಧಾಪ್ಯದಲ್ಲಿ ಆರೈಕೆ ಮಾಡದಿದ್ದರೂ ಪುರಾಚಿ ಥಾಳವಿ ಅಮ್ಮಾ ಕ್ಯಾಂಟೀನ್ ಮಾಡುತ್ತದೆ ಎಂದು ಉಲ್ಲೇಖಿಸಲಾಗಿದೆ.
ಇನ್ನು ಡಿಎಂಕೆ ಪರ ಪ್ರಚಾರದಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರು ಸಾಮಾನ್ಯ ಜನರ ಸಮಸ್ಯೆಗಳನ್ನು ಅರ್ಥ ಮಾಡುತ್ತಿಲ್ಲ. ಈ ಜಾಹೀರಾತಿನಲ್ಲಿ ಚಾಪರ್ ಹಗರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಜನಸಾಮಾನ್ಯರ ಸಮಸ್ಯೆ ಅರ್ಥ ಮಾಡಲು ಸಾಧ್ಯವಿಲ್ಲ. ಅವರ ಸರ್ಕಾರ ಕೊನೆಗೊಳ್ಳಬೇಕು ಎಂದು ಹೇಳಲಾಗಿದೆ.
ಆದರೆ ತಾನು ಚುನಾವಣಾ ಪ್ರಚಾರಕ್ಕಾಗಿ ನಟಿಸುತ್ತಿರುವ ಬಗ್ಗೆ ಅರಿವಿರಲಿಲ್ಲ. ತನಗೆ ಕಿರು ಚಿತ್ರ ಹಾಗೂ ಒಂದು ಜಾಹೀರಾತಿಗೆ ನಟಿಸುವಂತೆ ಹೇಳಲಾಗಿತ್ತು. ಈ ಬಗ್ಗೆ ಅರಿವು ಇದ್ದಿದ್ದರೆ ಚುನಾವಣಾ ಪ್ರಚಾರ ಪಾತ್ರದಲ್ಲಿ ನಟಿಸುತ್ತಿರಲಿಲ್ಲ ಎಂದು ಕಸ್ತೂರಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.