ಪಣಜಿ: ಐತಿಹಾಸಿಕ ಸೀ ಹಾರಿಯರ್ಸ್ ಫೈಟರ್ ಫ್ಲೇನ್ಗಳು ಬುಧವಾರ ಭಾರತೀಯ ನೌಕಾ ಸೇನೆಯಿಂದ ನಿವೃತ್ತಿಯನ್ನು ಪಡೆದುಕೊಂಡಿವೆ. ಈ ಮೂಲಕ ನೌಕೆಯಲ್ಲಿನ 30 ವರ್ಷಗಳ ತಮ್ಮ ಅದ್ಭುತ ಅಧ್ಯಾಯವನ್ನು ಹಾರಿಯರ್ಸ್ ಅಂತ್ಯಗೊಳಿಸಿವೆ.
ಹಾರಿಯರ್ಸ್ನ ಸ್ಥಾನವನ್ನನ್ನು ಸ್ಕ್ವಾಡ್ರೋನ್ ಆಫ್ ರಷ್ಯಾನ್ ಮಿಗ್-೨೯ಕೆ ಆಕ್ರಮಿಸಿಕೊಂಡಿದೆ.
ಬುಧವಾರ ಗೋವಾದ ವಾಸ್ಕೋದಲ್ಲಿನ ಐಎನ್ಎಸ್ ಹಂಸ್ ಬೇಸ್ನಲ್ಲಿ ನಡೆದ ಅಧಿಕೃತ ಸಮಾರಂಭದಲ್ಲಿ ಹಾರಿಯರ್ಸ್ಗೆ ವಿದಾಯ ಹೇಳಿ, ಸ್ಕ್ವಾಡ್ರೋನ್ ಆಫ್ ರಷ್ಯಾನ್ ಮಿಗ್-29ಕೆಯನ್ನು ಭಾರತೀಯ ನೌಕೆ ಸ್ವಾಗತಿಸಿದೆ.
ನೌಕಾದಳದ ಮುಖ್ಯಸ್ಥ ಆರ್ಕೆ ಧವನ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.
ಫಾಲ್ಕ್ಲ್ಯಾಂಡ್ಸ್ ಯುದ್ಧದಲ್ಲಿ ಹಾರಿಯರ್ಸ್ನ್ನು ಬಳಸಲಾಗಿತ್ತು, ಆ ವೇಳೆ ಇದೊಂದೆ ಬ್ರಿಟಿಷ್ ಟಾಸ್ಕ್ ಫೋರ್ಸ್ನ್ನು ರಕ್ಷಿಸಲು ಇದ್ದ ಫಿಕ್ಸ್ಡ್ ವಿಂಗ್ ಫೈಟರ್ ಎಂದು ನೌಕಾಸೇನೆ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.