ನವದೆಹಲಿ: ಬಿಜೆಪಿ ಬಹಿರಂಗಪಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಪದವಿ ಪ್ರಮಾಣ ಪತ್ರ ನಿಖರವಾದುದು, ಪ್ರಧಾನಿಯವರು ಪದವಿ ಶಿಕ್ಷಣ ಪಡೆದಿದ್ದಾರೆ ಎಂಬುದಕ್ಕೆ ಅದರಲ್ಲಿರುವ ಎಲ್ಲಾ ದಾಖಲೆಗಳೂ ನೈಜವಾದುದು, ಆದರೆ ಪ್ರಮಾಣಪತ್ರದಲ್ಲಿ ವಿವಿ ಕಡೆಯಿಂದಲೇ ಕೆಲವೊಂದು ಸಣ್ಣ ತಪ್ಪುಗಳಾಗಿವೆ ಎಂದು ದೆಹಲಿ ವಿಶ್ವವಿದ್ಯಾಲಯದ ಕುಲಪತಿಗಳು ತಿಳಿಸಿದ್ದಾರೆ.
1979ರಲ್ಲಿ ಮೋದಿಯವರು ಬಾಹ್ಯ ವಿದ್ಯಾರ್ಥಿಯಾಗಿ ದೆಹಲಿ ವಿಶ್ವವಿದ್ಯಾನಿಲಯದಿಂದ ಪದವಿ ಶಿಕ್ಷಣವನ್ನು ಪಡೆದುಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಬಹಿರಂಗಪಡಿಸಿದ್ದಾರೆ.
ಆದರೆ ಮೋದಿ ಪದವಿಯೇ ಮಾಡಿಲ್ಲ, ಅವರು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದ ಎಎಪಿ ಮಾತ್ರ ಬಿಜೆಪಿ ಬಹಿರಂಗಪಡಿಸಿದ್ದು ನಕಲಿ ಪ್ರಮಾಣ ಪತ್ರ ಎಂದು ಆಪಾದನೆ ಮಾಡಿತ್ತು.
ಆದರೀಗ ವಿವಿ ಕುಲಪತಿ ತರುಣ್ ದಾಸ ಅವರೇ ಮೋದಿ ಪದವಿ ಪಡೆದಿರುವುದು ನಿಜ, ಅದು ನಿಖರ ಪ್ರಮಾಣ ಪತ್ರ ಎಂದು ಸ್ಪಷ್ಟನೆ ನೀಡಿದ್ದಾರೆ. ಇದು ಎಎಪಿಗೆ ತೀವ್ರ ಮುಖಭಂಗವನ್ನು ಉಂಟು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.